News Karnataka Kannada
Friday, April 12 2024
Cricket
ಕ್ರೀಡೆ

ಡ್ಯಾನಿಶ್‌ ಓಪನ್​​ ಈಜುಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಟ ಮಾಧವನ್‌ ಪುತ್ರ ವೇದಾಂತ್

Actor Madhavan's son Vedanth is in the news for winning a gold medal in swimming competition once again
Photo Credit :

ಚಿತ್ರ ನಟ ಮಾಧವನ್‌ ಪುತ್ರ ವೇದಾಂತ್​ ಅವರು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ ಈಜುಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಪುರುಷರ 800 ಮೀಟರ್ಸ್‌ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ 16 ವರ್ಷದ ವೇದಾಂತ್‌ ಮಾಧವನ್ ಕೇವಲ 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಪದಕಕ್ಕೆ ಮುತ್ತಿಕ್ಕಿದರು.

ಡ್ಯಾನಿಶ್‌ ಓಪನ್ ನಲ್ಲಿ ನಿನ್ನೆ ನಡೆದಿದ್ದ 1500 ಮೀಟರ್​ ಫ್ರೀಸ್ಟೈಲ್​ನಲ್ಲಿ ವೇದಾಂತ್‌ ಬೆಳ್ಳಿ ಗೆದ್ದಿದ್ದರು. ಇದೀಗ ಚಿನ್ನ ಗೆಲ್ಲುವ ಮೂಲಕ ಎರಡನೇ ಪದ ಗೆದ್ದಿರುವ ಸಾಧನೆ ಮಾಡಿದ್ದಾರೆ.

10 ಮಂದಿ ಸ್ಪರ್ಧಿಸಿದ್ದ ಈ ವಿಭಾಗದ ಫೈನಲ್​ ಸುತ್ತಿನಲ್ಲಿ ವೇದಾಂತ್​ 15 ನಿಮಿಷ 57.86 ಸೆಕೆಂಡ್​ಗಳಲ್ಲಿ ಗುರಿ ತಲುಪಿ 2ನೇ ಬೆಳ್ಳಿಗೆದ್ದಿದ್ದರು. ಭಾರತದವರೇ ಆದ ಸಾಜನ್‌ ಪ್ರಕಾಶ್‌ ಚಿನ್ನ ಗೆದ್ದಿದ್ದರು.

ವೇದಾಂತ್‌ ಚಿನ್ನದ ಪದಕ ಸ್ವೀಕರಿಸುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿರುವ ಮಾಧವನ್‌ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ನಿಮ್ಮೆಲ್ಲರ ಆಶೀರ್ವಾದ, ದೇವರ ಕೃಪೆಯಿಂದ ಸಜನ್ ಪ್ರಕಾಶ್ ಮತ್ತು ವೇದಾಂತ್​ ಮಾಧವನ್​ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಂದುಕೊಟ್ಟಿದ್ದಾರೆ. ಕೋಚ್​ ಪ್ರದೀಪ್​ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್​ ಆಫ್ ಇಂಡಿಯಾ ಮತ್ತು ಎಎನ್​ಎಸ್​ಎಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು