News Karnataka Kannada
Tuesday, April 23 2024
Cricket
ಕ್ರೀಡೆ

ಕ್ರಿಕೆಟ್‌ಗೆ ವಿದಾಯ ಹೇಳಿದ ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್

Ross Tailer
Photo Credit :

ಹ್ಯಾಮಿಲ್ಟನ್ : ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ 16 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.

ಸೋಮವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದ ನಂತರ ಟೇಲರ್ ಅವರಿಗೆ ಬೀಳ್ಕೋಡುಗೆ ನೀಡಲಾಯಿತು. ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಟೇಲರ್‌ ಅವರನ್ನು ಸನ್ಮಾನಿಸಿದರು. ಸೆಡಾನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವು 115 ರನ್‌ಗಳಿಂದ ಜಯಿಸಿತು. ತಮ್ಮ ವೃತ್ತಿಜೀವನದ ಕೊನೆಯ ಇನಿಂಗ್ಸ್‌ನಲ್ಲಿ 14 ರನ್‌ ಗಳಿಸಿ ಔಟಾದರು.

ಹೋದ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ಟೇಲರ್ ವಿದಾಯ ಹೇಳಿದ್ದರು. 2006ರಿಂದ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದರು ಟೇಲರ್. ಟೆಸ್ಟ್ ಮತ್ತ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2015ರಲ್ಲಿ ಅವರು ಪರ್ತ್‌ನಲ್ಲಿ ಗಳಿಸಿದ್ದ 290 ರನ್‌ಗಳು ನ್ಯೂಜಿಲೆಂಡ್ ಪರವಾಗಿ ದಾಖಲಾಗಿರುವ ವೈಯಕ್ತಿಕ ಶ್ರೇಷ್ಠ ಸ್ಕೋರ್ ಆಗಿದೆ.

‘ಹದಿನಾರು ವರ್ಷಗಳ ಈ ಪಯಣದಲ್ಲಿ ಹಲವಾರು ಮಧುರ ಕ್ಷಣಗಳನ್ನು ಅನುಭವಿಸಿದ್ದೇನೆ. ಸುಂದರ ನೆನಪುಗಳು ನನ್ನೊಂದಿಗೆ ಇವೆ. ಕ್ರಿಕೆಟ್ ಈಗ ಜಾಗತಿಕ ಕ್ರೀಡೆಯಾಗಿ ಬೆಳೆಯುತ್ತಿದೆ. ಇಂದಿನ ಎಲ್ಲ ಯುವ ಆಟಗಾರರಿಗೆ ಮತ್ತು ನೆದರ್ಲೆಂಡ್ಸ್‌ನಂತಹ ಹೊಸ ತಂಡಗಳಿಗೆ ಉತ್ತಮ ಭವಿಷ್ಯ ಇದೆ. ನಾನು ಕ್ರಿಕೆಟಿಗನಾಗಿ ಬೆಳೆಯಲು ಸಹಾಯ ಮಾಡಿದ ನ್ಯೂಜಿಲೆಂಡ್ ಸಂಸ್ಥೆ ಮತ್ತು ಅಭಿಮಾನಿಗಳಿಗೆ ಚಿರಋಣಿಯಾಗಿರುವೆ’ ಎಂದು ಟೇಲರ್ ಈ ಸಂದರ್ಭದಲ್ಲಿ ಹೇಳಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ 333 (ಮಾರ್ಟಿನ್ ಗಪ್ಟಿಲ್ 106, ವಿಲ್ ಯಂಗ್ 120, ಫ್ರೆಡ್ ಕ್ಲಾಸನ್ 62ಕ್ಕೆ2, ಲಾಗನ್ ವ್ಯಾನ್ ಬೀಕ್ 58ಕ್ಕೆ2, ಕ್ಲೇಟನ್ ಫ್ಲಾಯ್ಡ್ 41ಕ್ಕೆ2) ನೆದರ್ಲೆಂಡ್ಸ್: 42.3 ಓವರ್‌ಗಳಲ್ಲಿ 218 (ಸ್ಟೀಫನ್ ಮೈಬರ್ಗ್ 64, ವಿಕ್ರಂಜೀತ್ ಸಿಂಗ್ 25, ಲಾಗನ್ ವ್ಯಾನ್ ಬೀಕ್ 32, ಮ್ಯಾಟ್ ಹೆನ್ರಿ 36ಕ್ಕೆ4, ಡಫ್ ಬ್ರೇಸ್‌ವೆಲ್ 23ಕ್ಕೆ2) ಫಲಿತಾಂಶ: ನ್ಯೂಜಿಲೆಂಡ್‌ಗೆ 115 ರನ್‌ಗಳ ಜಯ. 3-0ಯಿಂದ ಸರಣಿ ಜಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು