News Karnataka Kannada
Friday, April 12 2024
Cricket
ಕ್ರೀಡೆ

ಕೊರೋನ ಕುರಿತು ಜನಜಾಗೃತಿ ವಿಡಿಯೋ ಹಂಚಿಕೊಂಡ ಆರ್ ಸಿ ಬಿ ತಂಡ

Photo Credit :

ಕೊರೋನ ಕುರಿತು ಜನಜಾಗೃತಿ ವಿಡಿಯೋ ಹಂಚಿಕೊಂಡ ಆರ್ ಸಿ ಬಿ ತಂಡ

ನವದೆಹಲಿ: ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ವ್ಯಾಪಿಸಿರುವ ಹಿನ್ನಲೆ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಹಾಗೂ ಮನೆಯಲ್ಲೇ ಇರಬೇಕು ಎಂಬುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮನವಿ ಮಾಡಿಕೊಂಡಿದ್ದಾರೆ.

 

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ ವೆಲ್, ದೇವದತ್ ಪಡಿಕ್ಕಲ್ ಸೇರಿದಂತೆ ಮತ್ತಿತರ ಆಟಗಾರರು, ಪ್ರತಿಯೊಬ್ಬರು ಮನೆಯಲ್ಲಿಯೇ ಇರಿ, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ಹೇಳುವ ವಿಡಿಯೋವೊಂದನ್ನು ಆರ್ ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡುವ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ.

 

ವಿರಾಟ್ ಕೊಹ್ಲಿಯ ಸಂದೇಶದೊಂದಿಗೆ ಈ ವಿಡಿಯೋ ಎಲ್ಲರೂ ಮನೆಯಲ್ಲೇ ಇರಿ ಹಾಗೂ ಸುರಕ್ಷಿತವಾಗಿರಿ. ಈ ವೈರಸ್ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದು ಸಂದೇಶ ನೀಡಿದ್ದಾರೆ.

 

ಇನ್ನೊಂದೆಡೆ ಇಂದು ಆರ್ ಸಿಬಿ ಹಾಗೂ ಸಿಎಸ್ ಕೆ ನಡುವೆ ಪಂದ್ಯ ಆರಂಭವಾಗಿದ್ದು, ಸಿ ಎಸ್ ಕೆ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡು 20 ಓವರ್ ಗೆ 191 ರನ್ ಹೊಡೆದಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಆರ್ ಸಿಬಿ ಸತತ ಜಯಗಳಿಸಿದ್ದು, ಇಂದಿನ ಪಂದ್ಯ ಏನಾಗಲಿದೆ ಎಂದು ಕಾದುನೋಡಬೇಕಾಗಿದೆ. 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು