News Karnataka Kannada
Sunday, April 14 2024
Cricket
ಕ್ರೀಡೆ

ಇರಾನ್ ಮಣಿಸಿ 7ನೇ ಬಾರಿಗೆ ಏಷ್ಯನ್ ಕಬಡ್ಡಿ ಚಾಂಪಿಯನ್​ಶಿಪ್ ಗೆದ್ದ ಭಾರತ

Asian Kabaddi Championships
Photo Credit : Twitter

ಸೌತ್ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 32- 42 ಅಂತರದಿಂದ ಮಣಿಸಿದ ಭಾರತ ಕಬಡ್ಡಿ ತಂಡ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಇದರೊಂದಿಗೆ ಇದುವರೆಗೆ ನಡೆದಿರುವ 11 ಆವೃತ್ತಿಗಳಲ್ಲಿ ಭಾರತ ಒಂದೇ ಬರೋಬ್ಬರಿ 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಪವನ್ ಸೆಹ್ರಾವತ್ ನೇತೃತ್ವದಲ್ಲಿ ಚಾಂಪಿಯನ್​ಶಿಪ್​ಗೆ ಎಂಟ್ರಿಕೊಟ್ಟಿದ ಭಾರತ ಆಡಿದ 6 ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದಿರುವುದು ಇಲ್ಲಿ ವಿಶೇಷ. ಅಲ್ಲದೆ ಭಾರತ ಆಟಕ್ಕೆ ಯಾವ ಎದುರಾಳಿ ತಂಡವೂ ನಿಕಟ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ ಇರಾನ್ ತಂಡ ಮಾತ್ರ ಎರಡು ಮುಖಾಮುಖಿಯಲ್ಲಿ ಕಡಿಮೆ ಅಂತರದ ಸೋಲನ್ನು ಎದುರಿಸುವಲ್ಲಿ ಕೊಂಚ ಸಫಲವಾಯಿತು.

ಜೂನ್ 27 ರಿಂದ ಆರಂಭವಾದ ಈ ಪಂದ್ಯಾವಳಿ ನಾಲ್ಕು ದಿನಗಳ ಕಾಲ ಅಂದರೆ, ಜೂನ್ 30ರವರೆಗೆ ನಡೆಯಿತು. ಒಟ್ಟು ಆರು ತಂಡಗಳು ಪಂದ್ಯಾವಳಿಗೆ ಪ್ರವೇಶಿಸಿದ್ದವು. ಇವುಗಳಲ್ಲಿ ಭಾರತ, ಇರಾನ್, ಸೌತ್ ಕೊರಿಯಾ, ಜಪಾನ್, ಹಾಂಗ್​ ಕಾಂಗ್, ಚೈನೀಸ್ ತೈಪೆ ತಂಡಗಳು ಸೇರಿದ್ದವು. ಲೀಗ್ ಹಂತದಲ್ಲಿ ಭಾರತ ಆಡಿದ 5 ರಲ್ಲಿ ಐದು ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿಕೊಟ್ಟಿತ್ತು. ಇತ್ತ ಇರಾನ್ ಕೂಡ ಒಟ್ಟು ಐದು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಗೆದ್ದು ಫೈನಲ್ ತಲುಪಿತ್ತು.

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ವಿಜೇತ ತಂಡಕ್ಕೆ ಬಹುಮಾನವಾಗಿ ಚಿನ್ನದ ಪದಕವನ್ನು ನೀಡಲಾಗುತ್ತದೆ. ಇದರರ್ಥ ಭಾರತಕ್ಕೆ ಇದೀಗ ಚಿನ್ನದ ಪದಕ ಸಿಕ್ಕಿದೆ. ಹಾಗೆಯೇ ರನ್ನರ್ ಅಪ್ ತಂಡದವಾದ ಇರಾನ್​ಗೆ ಬೆಳ್ಳಿ ಪದಕ ಸಿಗಲಿದೆ. 5 ಪಂದ್ಯಗಳಲ್ಲಿ 3 ಪಂದ್ಯ ಗೆದ್ದ ಚೈನೀಸ್ ತೈಪೆ ಕಂಚಿನ ಪದಕವನ್ನು ಪಡೆಯಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು