ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುವ ವಿಶ್ವ ಪ್ರವಾಸೋದ್ಯಮ ದಿನ, ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವಲ್ಲಿ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಈ ದಿನವನ್ನು ವಿಶ್ವ ಪ್ರವಾಸೋದ್ಯಮದ ಪ್ರಮುಖ ಮೈಲಿಗಲ್ಲು ಎನ್ನಬಹುದು. ಏಕೆಂದರೆ 1970 ಸೆಪ್ಟೆಂಬರ್ 27 ರಂದು ಯುಎನ್‌ಡಬ್ಲ್ಯೂಟಿಒ ಅನ್ನು ಅಂಗೀಕರಿಸಲಾಯಿತು. ಇದರ ವಾರ್ಷಿಕೋತ್ಸವದ ಪ್ರಯುಕ್ತ ಈ ದಿನವನ್ನು ಆಚರಿಸಲಾಗುತ್ತಿದೆ. ಯುಎನ್‌ಡಬ್ಲ್ಯೂಟಿಒ ಪ್ರಕಾರ, ಈ ದಿನ ವಿಶ್ವ ಪ್ರವಾಸೋದ್ಯಮ ದಿನಕ್ಕೆ ಸೂಕ್ತವಾಗಿದೆ. ಏಕೆಂದರೆ ಉತ್ತರ ಗೋಳಾರ್ಧದಲ್ಲಿ ಈ ವೇಳೆ ಪ್ರವಾಸೋದ್ಯಮಕ್ಕೆ ಸರಿಯಾದ ಸಮಯವಾಗಿದೆ. ದಕ್ಷಿಣ ಗೋಳಾರ್ಧದಲ್ಲಿ ಪ್ರವಾಸದ ಸಮಯ ಆರಂಭವಾಗುತ್ತದೆ. ಪ್ರತಿ ವರ್ಷ ವಿಭಿನ್ನ ವಿಷಯದೊಂದಿಗೆ ಈ ದಿನವನ್ನು ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ.
ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುವ ಉದ್ದೇಶ ಈ ದಿನವನ್ನು ಆಚರಿಸುವ ಉದ್ದೇಶ ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ಜನರು ಪ್ರವಾಸಕ್ಕೆ ತೆರಳಿದಾಗ ಅಲ್ಲಿಯೇ ಉಳಿಯುತ್ತಾರೆ, ಅಲ್ಲಿಯೇ ತಿನ್ನುತ್ತಾರೆ, ಅಲ್ಲಿಯೇ ಶಾಂಪಿಂಗ್ ಕೂಡ ಮಾಡುತ್ತಾರೆ ಇದರಿಂದ ಉದ್ಯೋಗವೂ ಹೆಚ್ಚುತ್ತದೆ. ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಲು ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣದತ್ತ ಜನರು ಹೆಚ್ಚು ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ.
ಬಿಡುವಿಲ್ಲದ ಕೆಲಸದಿಮದಾಗಿ ಜನರು ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ತಮಗೂ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ದಿನವೂ ಇದೇ ಕೆಲಸ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವಿರಾಮ ತೆಗೆದುಕೊಂಡು ತೆಗೆದುಕೊಂಡು ಪ್ರವಾಸಕ್ಕೆ ತೆರಳುವುದರಿಂದ ಒತ್ತಡವು ದೂರವಾಗುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಇದು ನಿಮ್ಮ ಕೆಲಸದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇಲ್ಲಿನ ಪ್ರತಿರಾಜ್ಯದಲ್ಲಿಯೂ ಪ್ರವಾಸಿ ತಾಣಗಳು ಸಾಕಷ್ಟಿವೆ. ಇವುಗಳನ್ನು ಪ್ರವಾಸಿಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕಿದೆ. ಕರ್ನಾಟಕದಲ್ಲಿ ಹಲವು ಪ್ರದೇಶಗಳು ಪ್ರವಾಸಿಗರನ್ನು ಸೆಳೆಯಲು ಸೂಕ್ತವಾಗಿದ್ದರೂ ಕೆಲವೇ ಪ್ರದೇಶಗಳಿಗೆ ಮಾತ್ರ ಇದಕ್ಕೆ ಮಹತ್ವ ನೀಡಲಾಗಿದೆ. ಭಾರತದಲ್ಲಿ ಪ್ರವಾಸೋದ್ಯಮವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ವಿದೇಶಿ ವಿನಿಮಯದ ಎರಡನೇ ಅತಿದೊಡ್ಡ ಗಳಿಕೆಯಾಗಿದೆ. ಪ್ರವಾಸೋದ್ಯಮ ಕ್ಷೇತ್ರು ಕೌಶಲ ಮತ್ತು ಕೌಶಲರಹಿತವುಳ್ಳ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸಿದೆ.
ಈ ಬಾರಿ “ಪ್ರವಾಸೋದ್ಯಮ ಮತ್ತು ಶಾಂತಿ” ಅನ್ನು 2024 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ವಿಷಯವಾಗಿ ಆಯ್ಕೆ ಮಾಡಲಾಗಿದೆ. ಈ ಥೀಮ್ ಪ್ರವಾಸೋದ್ಯಮವು ಅಂತರರಾಷ್ಟ್ರೀಯ ಸಾಮರಸ್ಯ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.