Bengaluru 22°C
Ad

ಇಂದು ರಾಷ್ಟ್ರೀಯ ಹಿಂದಿ ದಿನ: ಮಹತ್ವದ ಬಗ್ಗೆ ತಿಳಿದುಕೊಳ್ಳಿ!

ಹಿಂದಿ ಭಾಷೆಯನ್ನು ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಮಾತನಾಡಲಾಗುತ್ತದೆ. ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರೆತಿಲ್ಲವಾದರೂ, ಅಧಿಕೃತ ಭಾಷೆಯಾಗಿ ಹಿಂದಿಗೆ ವಿಶೇಷ ಸ್ಥಾನ ನೀಡಲಾಗಿದೆ.

ಹಿಂದಿ ಭಾಷೆಯನ್ನು ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಮಾತನಾಡಲಾಗುತ್ತದೆ. ಭಾರತದಲ್ಲಿ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ದೊರೆತಿಲ್ಲವಾದರೂ, ಅಧಿಕೃತ ಭಾಷೆಯಾಗಿ ಹಿಂದಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹಿಂದಿ ಭಾಷೆಯನ್ನು ಬಳಸುವ ಮೂಲಕ ವಿಶ್ವದ ಎಲ್ಲಾ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸಲು ಪ್ರತಿವರ್ಷ ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ.

ಹಿಂದಿ ದಿವಸ್ ಆಚರಣೆಯು ಅಧಿಕೃತವಾಗಿ ಸೆಪ್ಟೆಂಬರ್ 14, 1953 ರಂದು ಪ್ರಾರಂಭವಾಯಿತು. 1953 ರಲ್ಲಿ, ಪಂಡಿತ್ ಜವಾಹರಲಾಲ್ ನೆಹರು ಅವರು ಭಾರತದ ಪ್ರಧಾನ ಮಂತ್ರಿಯಾಗಿ ಸೆಪ್ಟೆಂಬರ್ 14 ಅನ್ನು ರಾಷ್ಟ್ರೀಯ ಹಿಂದಿ ದಿನವಾಗಿ ಆಚರಿಸುವಂತೆ ಕರೆ ನೀಡಿದರು.

ಪ್ರತಿವರ್ಷ ಈ ದಿನದಂದು ರಾಷ್ಟ್ರೀಯ ಹಿಂದಿ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಭಾಷಾ ಪ್ರಚಾರ ಸಮಿತಿಯ ಶಿಫಾರಸಿನ ನಂತರ, 1953 ರ ಸೆಪ್ಟೆಂಬರ್ 14 ರಿಂದ ಹಿಂದಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ವಿಶ್ವ ಹಿಂದಿ ದಿನವನ್ನು ಜನವರಿ 10 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ವರ್ಷಕ್ಕೆ ಎರಡು ಬಾರಿ ಹಿಂದಿ ದಿನ ಆಚರಿಸಲಾಗುತ್ತದೆ.

ಹಿಂದಿ ಎಂಬ ಹೆಸರು ಪರ್ಷಿಯನ್ ಪದ ಹಿಂದ್​ನಿಂದ ಬಂದಿದೆ. ಇದರರ್ಥ ಸಿಂಧೂ ನದಿಯ ಭೂಮಿ. 11 ನೇ ಶತಮಾನದ ಆರಂಭದಲ್ಲಿ ಗಂಗಾ ನದಿಯ ಬಯಲು ಮತ್ತು ಪಂಜಾಬ್ ಮೇಲೆ ಆಕ್ರಮಣ ಮಾಡಿದ ಪರ್ಷಿಯನ್ ಮಾತನಾಡುವ ಟರ್ಕರು ಸಿಂಧೂ ನದಿಯ ಉದ್ದಕ್ಕೂ ಮಾತನಾಡುವ ಭಾಷೆಗೆ ಹಿಂದಿ ಎಂಬ ಹೆಸರನ್ನು ನೀಡಿದರು. ಈ ಭಾಷೆ ಭಾರತದ ಅಧಿಕೃತ ಭಾಷೆಯಾಗಿದೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಮಾನ್ಯತೆ ಪಡೆದ ಅಲ್ಪಸಂಖ್ಯಾತ ಭಾಷೆಯಾಗಿದೆ.

 

Ad
Ad
Nk Channel Final 21 09 2023