ಮೇಷ ರಾಶಿ: ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು. ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳ ಬೇಕಾಗಬಹುದು. ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಸಂತೋಷವನ್ನು ಕೆಲವರಿಗೆ ಸಹಿಸುವುದು ಕಷ್ಟವಾದೀತು.
ವೃಷಭ ರಾಶಿ: ಮನೆಯಲ್ಲಿ ಮಂಗಲಕಾರ್ಯಕ್ಕೆ ಆಸಕ್ತಿಯನ್ನು ತೋರುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ತರುವರು. ನಿಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡುವರು. ಪಾಲುದಾರಿಕೆಯನ್ನು ಸುಲಭಕ್ಕೆ ಬಿಟ್ಟುಕೊಡಲಾರಿರಿ. ಕಛೇರಿಯ ಕೆಲಸಗಳನ್ನು ನೀವು ಅನಾಯಾಸವಾಗಿ ಮಾಡುವಿರಿ. ಅನಾರೋಗ್ಯದ ಕಾರಣದಿಂದ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು.
ಮಿಥುನ ರಾಶಿ: ನಿಮಗೆ ಖರೀದಿಯಲ್ಲಿ ಮೋಸವಾಗಲಿದೆ. ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಸಂಗಾತಿಗಳ ನಡುವೆ ಸ್ವಪ್ರತಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗಬಹುದು. ನಿಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಲಿದ್ದೀರಿ. ಹೊಸ ಪರಿಚಯದ ನಡುವೆ ಆತ್ಮೀಯತೆ ಬೆಳೆಯಬಹುದು. ನೇರ ಮಾತುಗಳು ನಿಮಗೇ ಮುಜುಗರ ತರಬಹುದು. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಇಷ್ಟವಾದೀತು.
ಕರ್ಕಾಟಕ ರಾಶಿ: ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುವುದು ಇಷ್ಟವಾಗದು. ಹಳೆಯ ನೆನಪುಗಳು ನಿಮ್ಮ ಕಾಡಬಹುದು. ಎಲ್ಲ ರೀತಿಯಿಂದ ಹೊಂದಿಕೆ ಆಗುವವರ ಜೊತೆ ಸ್ನೇಹವನ್ನು ಮಾಡುವಿರಿ. ಕೃಷಿಯ ಕೆಲಸದಲ್ಲಿ ನಿಮಗೆ ಉತ್ಸಾಹ ಕಡಿಮೆ ಆಗಬಹುದು. ಸಾಲವನ್ನು ಮಾಡವ ಸ್ಥಿತಿ ಬರಬಹುದು. ಕುಶಲ ಕರ್ಮಗಳನ್ನು ಮಾಡಲು ಕಲಿಯುವಿರಿ. ಸಂಶೋಧನೆಗೆ ಹೆಚ್ಚಿನ ಒತ್ತು ಸಿಗಬಹುದು. ಕೆಲವರು ನಿಮ್ಮ ನಂಬಿಕೆಗೆ ಘಾಸಿಯನ್ನು ಉಂಟುಮಾಡಬಹುದು.