Ad

ಇಂದಿನಿಂದ ಶ್ರಾವಣ ಮಾಸ ಆರಂಭ: ವಿಶೇಷತೆ ಏನು ಗೊತ್ತಾ?

ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ.

ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ.

ಈ ಮಾಸ ಪ್ರಾರಂಭವಾಗುವ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಬಂದ ಕಾರಣ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ.

ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಹಾಗೇ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ.

ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ. ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆ.

Ad
Ad
Nk Channel Final 21 09 2023