ಮೇಷ ರಾಶಿ: ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಡಿ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ಮಾಡುವಿರಿ. ನಿಮ್ಮ ಯಶಸ್ಸು ನಿಮಗೆ ಮುಳುವಾಗಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು.
ವೃಷಭ ರಾಶಿ: ಇಂದು ನಿಮ್ಮ ಬಗ್ಗೆ ತಿಳಿಯದೇ ಸುಮ್ಮನೇ ಕುಖ್ಯಾತಿ ಬರುವುದು. ಆಸ್ತಿಯ ವಿಚಾರಕ್ಕೆ ಕುಟುಂಬದಲ್ಲಿ ಪರಸ್ಪರ ಜಗಳವಾಗುವ ಸಾಧ್ಯತೆ ಇದೆ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಮಾಡುವುದು ಉತ್ತಮ. ಕಡಿಮೆ ಖರ್ಚಿನಲ್ಲಿ ನಿಮ್ಮ ಕೆಲಸವು ಮುಗಿಯುವಂತೆ ನೋಡಿಕೊಳ್ಳುವಿರಿ. ಮಾತನಾಡಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಪ್ರಶಂಸೆಯಿಂದ ನೀವು ದೂರವಿರುವಿರಿ. ಹಣವಿದ್ದ ಮಾತ್ರಕ್ಕೆ ಎಲ್ಲವೂ ಸಾಧ್ಯವಾಗದು ಎಂಬ ಸತ್ಯವು ಗೊತ್ತಾಗುವುದು. ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ.
ಮಿಥುನ ರಾಶಿ: ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ನಿಮಗೆ ನಿಮ್ಮವರ ಮಾತಿನಿಂದ ಇರುಸು ಮುರುಸಾದೀತು. ರಾಜಕೀಯ ವ್ಯಕ್ತಿಗಳಿಂದ ಕೆಲಸವಾಗಲು ಅವರಿಗೆ ಹಣವನ್ನು ಕೊಡುವಿರಿ. ಸ್ನೇಹಿತ ಸಹವಾಸದಿಂದ ದುರಭ್ಯಾಸವನ್ನು ಕಲಿಯುವ ಸಾಧ್ಯತೆ ಇದೆ. ಎಲ್ಲರ ಎದುರೂ ನಿಮ್ಮ ಆತುರವನ್ನು ತೋರಿಸುವುದು ಬೇಡ. ನಿಮ್ಮ ಯೋಜನೆಗಳು ಹೆಚ್ಚು ಇಷ್ಟವಾಗಲಿದೆ. ನಿಮ್ಮ ಮೇಲೆ ಬರುವ ನಕಾರಾತ್ಮಕ ಮಾತುಗಳನ್ನು ನೀವು ಅಲ್ಲಗಳೆಯುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಏಕಾಂತದಲ್ಲಿ ನಿಮಗೆ ಹಿತವೆನಿಸುವುದು.
ಕರ್ಕಾಟಕ ರಾಶಿ: ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ದೂರದ ಬಂಧುಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ಅಹಂಕಾರದಂತೆ ತೋರೀತು. ವರ್ತನೆಯನ್ನು ಆದಷ್ಟು ಸಂದರ್ಭಕ್ಕೆ ತಕ್ಕಂತೆ ಇಟ್ಟುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಭಡ್ತಿಯನ್ನು ಕೇಳುವಿರಿ. ಕೆಲವರ ಮಾತುಗಳು ನಿಮಗೆ ನೋವನ್ನು ತಂದೀತು. ಹೇಳಿಕೊಳ್ಳದೇ ಒಳಗೇ ಇಟ್ಟುಕೊಳ್ಳುವಿರಿ. ಉದ್ಯೋಗದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು.