Bengaluru 18°C

GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿಗೆ ಹೊಸ ರೂಪ ಪಡೆದ ನ್ಯೂಸ್ ಕರ್ನಾಟಕ

ಇಂದಿನ ಡಿಜಿಟಲ್ ಯುಗದ ಪೈಪೋಟಿಯಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಡೆಸುವುದೆಂದರೆ ಸುಲಭವಲ್ಲ. ಆದರೆ ನ್ಯೂಸ್ ಕರ್ನಾಟಕ ಓದುಗರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವಲ್ಲಿ ಸಫಲವಾಗಿದ್ದು,

ನ್ಯೂಸ್ ಕರ್ನಾಟಕ: ಇಂದಿನ ಡಿಜಿಟಲ್ ಯುಗದ ಪೈಪೋಟಿಯಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಡೆಸುವುದೆಂದರೆ ಸುಲಭವಲ್ಲ. ಆದರೆ ನ್ಯೂಸ್ ಕರ್ನಾಟಕ ಓದುಗರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವಲ್ಲಿ ಸಫಲವಾಗಿದ್ದು, ಇದಕ್ಕೆ ಗೂಗಲ್ ನ್ಯೂಸ್ ಇನಿಶಿಯೇಟಿವ್ (GNI) ಹಾಗೂ ಮೀಡಿಯಾಲಜಿ ಸಾಫ್ಟ್ವೇರ್ನ ಸಹಯೋಗವು ಸಾಥ್‌ ನೀಡಿದೆ.


ನ್ಯೂಸ್ ಕರ್ನಾಟಕ ಅತ್ಯಾಧುನಿಕ ವಿನ್ಯಾಸದ ರೂಪದಲ್ಲಿ ಓದುಗರನ್ನು ತಲುಪುತ್ತಿದ್ದು, ಡಿಜಿಟಲ್ ತಂತ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಗೂಗಲ್ ನ್ಯೂಸ್ ಇನಿಶಿಯೇಟಿವ್ ಕಾರ್ಯಕ್ರಮ ಅನುಕೂಲ ಮಾಡಿಕೊಟ್ಟಿದೆ. GNI ಸೂಚಿಸಿದ ವರದಿಗಳ ಆಧಾರದ ಮೇಲೆ, ವೆಬ್ಸೈಟ್ನಲ್ಲಿ ಹಲವು ಬದಲಾವಣೆ ಮಾಡಿದ್ದು,


ಅದು ನಮ್ಮ ಸೈಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಓದುಗರ ತಲುಪಲು ಅನುಕೂಲಾಗಿದೆ. Google ನ AI ಮತ್ತು ಡೇಟಾ ಅನಾಲಿಟಿಕ್ಸ್ ಪರಿಕರಗಳನ್ನು ಬಳಸಿಕೊಂಡು, ನ್ಯೂಸ್ ಕರ್ನಾಟಕ ತನ್ನ ಓದುಗರ ಆದ್ಯತೆಗಳು ಮತ್ತು ನಡವಳಿಕೆಯನ್ನು ಚೆನ್ನಾಗಿ ಅರ್ಥಮಾಡಿ ವಸ್ತುನಿಷ್ಠ ವರದಿ ನೀಡಲು ಮುಂದಾಗಿದೆ.


ಗೂಗಲ್ ನ್ಯೂಸ್ ಇನಿಶಿಯೇಟಿವ್ (GNI) ಕಾರ್ಯಕ್ರಮದ ಸಹಯೋಗದಿಂದ ಅತ್ಯಾಧುನಿಕ ಥೀಮ್ ಅಳವಡಿಸಿಕೊಂಡಿದ್ದು, ಇದರಿಂದ ನಮ್ಮ ನ್ಯೂಸ್ ಕರ್ನಾಟಕ ಅತ್ಯಾಧುನಿಕವಾಗಿ ವಿನ್ಯಾಸಗೊಂಡಿದೆ. ಈ ಹೊಸ ಥೀಮ್ ಅಳವಡಿಕೆಯಿಂದ ಇಂದು ನ್ಯೂಸ್ ಕರ್ನಾಟಕ ಗೆ ಟ್ರಾಫಿಕ್ ಕೂಡ ಜಾಸ್ತಿಯಾಗಿದ್ದು, ಲಕ್ಷಾಂತರ ಓದುಗರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.


ಈ ಭಾರಿ ರಾಜ್ಯದ ಕನ್ನಡ ಮಾಧ್ಯಮದಲ್ಲಿ GNI ತರಬೇತಿಗೆ ಆಯ್ಕೆಯಾದ ಕೆಲವೇ ಮಾಧ್ಯಮದಲ್ಲಿ ನ್ಯೂಸ್ ಕರ್ನಾಟಕ ಕೂಡ ಒಂದು. GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ Google ನ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಇದು ದೇಶದ ವಿವಿಧ ಭಾಷೆಗಳಲ್ಲಿ ಪತ್ರಿಕೋದ್ಯಮದ ಅಭಿವೃದ್ಧಿ, ಬೆಳವಣಿಗೆ, ಮತ್ತು ಸ್ಥಿರತೆಯನ್ನು ಬೆಂಬಲಿಸಲು ಉದ್ದೇಶಿಸಿದೆ.


ಈ ಕಾರ್ಯಕ್ರಮವು ಮಾಧ್ಯಮ ಸಂಸ್ಥೆಗಳನ್ನು ಮತ್ತು ಪತ್ರಿಕೋದ್ಯಮವನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನವೀಕರಿಸಲು ಹಾಗೂ ವಾಸ್ತವವಾದ ಮತ್ತು ಗುಣಮಟ್ಟದ ವಿಷಯವನ್ನು ಪ್ರೋತ್ಸಾಹಿಸಲು ಸಹಕಾರ ನೀಡುತ್ತದೆ.


GNI ನ ಮುಖ್ಯ ಉದ್ದೇಶ: ಪ್ರಾದೇಶಿಕ ಭಾಷಾ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸಿ ಸ್ಥಳೀಯ ಮತ್ತು ಅಲ್ಪ ಸಂಖ್ಯಾತ ಭಾಷೆಗಳಲ್ಲಿ ಸುದ್ದಿಯ ಗುಣಮಟ್ಟ ಹೆಚ್ಚಿಸುವುದಾಗಿದೆ. ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ನಿರಾಕರಿಸಲು ಪತ್ರಕರ್ತರಿಗೆ ಸೂಕ್ತ ಸಾಧನಗಳು ಮತ್ತು ತರಬೇತಿಗಳನ್ನು ಒದಗಿಸುತ್ತದೆ.


ಮಾಧ್ಯಮ ಸಂಸ್ಥೆಗಳನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಿಗೆ ಹೊಂದಿಸಿಕೊಳ್ಳಲು ಮತ್ತು ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಸ್ಥಳೀಯ ಭಾಷೆ -ನಿರ್ದಿಷ್ಟ ಪತ್ರಿಕೋದ್ಯಮ ಯೋಜನೆಗಳಿಗೆ ಓದುಗರನ್ನು ಹೆಚ್ಚು ತಲುಪಲು AI, ಅನುವಾದ ಸಾಧನಗಳು ಮತ್ತು ವಿಶ್ಲೇಷಣಾ ಸಾಧನಗಳನ್ನು ಒದಗಿಸುವ ಮೂಲಕ ದೇಶದ ಸುದ್ದಿ ಮಾಧ್ಯಮಗಳಿಗೆ GNI ಶಕ್ತಿ ತುಂಬುತ್ತಿದೆ.


GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ 2024 ರ ಕಾರಣದಿಂದಾಗಿ ನ್ಯೂಸ್ ಕರ್ನಾಟಕ ಡಿಜಿಟಲ್ ತಂತ್ರಗಳಲ್ಲಿ ಹಲವಾರು ಗಮನಾರ್ಹ ಸುಧಾರಣೆಗಳನ್ನು ಮಾಡಿಕೊಂಡಿದೆ. ಇದು ನಮ್ಮ ಓದುಗರನ್ನು ಹೆಚ್ಚಿಸಿದೆ ಜತೆಗೆ ನಮ್ಮ ಬ್ರ್ಯಾಂಡ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.


GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ Google ನ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಇದು ದೇಶದ ವಿವಿಧ ಭಾಷೆಗಳಲ್ಲಿ ಪತ್ರಿಕೋದ್ಯಮದ ಅಭಿವೃದ್ಧಿ, ಬೆಳವಣಿಗೆ, ಮತ್ತು ಸ್ಥಿರತೆಯನ್ನು ಬೆಂಬಲಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮವು ಮಾಧ್ಯಮ ಸಂಸ್ಥೆಗಳನ್ನು ಮತ್ತು ಪತ್ರಿಕೋದ್ಯಮವನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನವೀಕರಿಸಲು ಹಾಗೂ ವಾಸ್ತವವಾದ ಮತ್ತು ಗುಣಮಟ್ಟದ ವಿಷಯವನ್ನು ಪ್ರೋತ್ಸಾಹಿಸಲು ಸಹಕಾರ ನೀಡುತ್ತದೆ. ನ್ಯೂಸ್ ಕರ್ನಾಟಕ ಇದೀಗ ಶೇರ್‌ ಚಾಟ್‌, ವಾಟ್ಸಾ ಆಪ್‌, ಟ್ವಿಟರ್‌, ಫೇಸ್‌ ಬುಕ್‌ , ಗೂಗಲ್‌ ನ್ಯೂಸ್‌ ನಲ್ಲಿಯೂ ಲಭ್ಯವಿದೆ.


Nk Channel Final 21 09 2023