ಧನು ರಾಶಿ: ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು. ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮ್ಮ ಕಾರ್ಯವೂ ಮಂದಗತಿಯಲ್ಲಿ ಇಂದು ಸಾಗಬಹುದು.
ಮಕರ ರಾಶಿ: ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗಿ. ನೈಮಿತ್ತಿಕ ಕರ್ಮಗಳನ್ನು ನೀವು ಮಾಡಲೇಬೇಕಾಗುವುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸಮ್ಮಾನವನ್ನು ಪಡೆಯುವರು. ಸ್ನೇಹಸಂಬಂಧವು ಇನ್ನಷ್ಟು ಬಲವಾಗುವುದು. ದುಃಖದ ಸನ್ನಿವೇಶಗಳನ್ನು ನೀವು ಸಂತೋಷದ ಸಂದರ್ಭವಾಗಿ ಪರಿವರ್ತಿಸುವಿರಿ. ಇಷ್ಟದ ಜನರನ್ನು ಭೇಟಿಯಾಗಲು ಹೋಗಬಹುದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ.
ಕುಂಭ ರಾಶಿ: ನಿಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡಿ, ಹೊಸತನ್ನು ಪಡೆಯುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ನೀಡುವುದು. ಭವಿಷ್ಯದ ಬಗ್ಗೆ ಅನಗತ್ಯವಾದ ಆಲೋಚನೆಗಳು ಬರಬಹುದು. ಸ್ತ್ರೀಯರ ಸಹಾಯದಿಂದ ನಿಮ್ಮ ಕಛೇರಿಯ ಕಾರ್ಯವು ಸರಿಯಾಗುವುದು. ನಿಮ್ಮ ಹೇಳಿಕಯನ್ನು ಇಂದು ಬದಲಾಯಿಸುವಿರಿ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.
ಮೀನ ರಾಶಿ: ನೀವು ಇಂದು ಯಾವದನ್ನೂ ಪರಿಸ್ಥಿತಿಯ ಮೇಲೆ ಅಳೆಯಲು ಹೋಗುವುದು ಬೇಡ. ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಸ್ನೇಹಿತರನ್ನು ರಕ್ಷಿಸಲು ಹೋಗಿ ನೀವು ಅಪಾಯಕ್ಕೆ ಸಿಲುಕುವಿರಿ.