Bengaluru 21°C
Ad

ಇಂದಿನ ರಾಶಿ ಭವಿಷ್ಯ : ಉದ್ಯೋಗದಲ್ಲಿರುವವರು ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇ

ವಿದೇಶದಲ್ಲಿ ಇರವ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವರು. ಆದರೆ ಅಲ್ಲಿಯವರೆಗೆ ತಾಳ್ಮೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿ ಇರಲಿ. ಆಸ್ತಿಯ ತಕರಾರುಗಳು ಇತ್ಯರ್ಥವಾಗುವ ಸಮಯ ಹತ್ತಿರ ಬರುತ್ತಿದೆ.

ಮೇಷ ರಾಶಿ : ವಿದೇಶದಲ್ಲಿ ಇರವ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವರು. ಆದರೆ ಅಲ್ಲಿಯವರೆಗೆ ತಾಳ್ಮೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿ ಇರಲಿ. ಆಸ್ತಿಯ ತಕರಾರುಗಳು ಇತ್ಯರ್ಥವಾಗುವ ಸಮಯ ಹತ್ತಿರ ಬರುತ್ತಿದೆ. ಶಾಂತತೆಯನ್ನು ಕಾಯ್ದುಕೊಳ್ಳಿರಿ. ನಿಮಗೆ ದಕ್ಕಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿ ದೊರೆಯುವ ಸಾಧ್ಯತೆ ಇರುತ್ತದೆ. ಸ್ವಂತ ವಿಚಾರದಲ್ಲಿ ಮಧ್ಯಪ್ರವೇಶವನ್ನು ನಿಮ್ಮ ವ್ಯವಹಾರವು ಅಧಿಕ ಲಾಭವನ್ನು ಗಳಿಸಬಹುದು. ಅಧಿಕಾರಿ ವರ್ಗ ನಿಮ್ಮ ಮೇಲೆ ಕಣ್ಣಿಡಬಹುದು. ವಾಗ್ವಾದಗಳಿಗೆ ನೀವು ಅವಕಾಶಶನ್ನು ಕೊಡುವುದು ಬೇಡ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ದೀರ್ಘಾವಧಿಯ ಹೂಡಿಕೆಯು ನಿಮಗೆ ಲಾಭವಾಗಲಿದೆ. ನಿಮಗೆ ಸಂಗಾತಿಯ ಸಹಾಯವು ಸಿಗಬಹುದು. ಸಹೋದರನಿಂದ ಮನೆಯಲ್ಲಿ ಕಿರಿಕಿರಿ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು.

ವೃಷಭ ರಾಶಿ : ಇಂದು ವ್ಯಾವಹಾರಿಕವಾಗಿರುವ ಮನಶ್ಚಾಂಚಲ್ಯ ಅನೇಕ ವಿಧವಾಗಿ ನಿಮ್ಮನ್ನು ಕಾಡಬಹುದು.‌ ನಿಮ್ಮ ಪ್ರಯಾಣವನ್ನು ತಡೆಯಬಹುದು. ಧನಲಾಭವಾದರೂ ಮನಸ್ಸಿನಲ್ಲಿ ಬೇಸರದ ತುಂಬಿ ಇರುವುದು. ವೃತ್ತಿಯ ಒತ್ತಡವನ್ನು ಮನೆಗೆ ತರುವುದು ಬೇಡ. ನೀವು ಪರಿಚಿತರಿಂದ ಪ್ರಯೋಜನ ಪಡೆಯಲು ಬಯಸುವಿರಿ. ವೃತ್ತಿಜೀವನದಲ್ಲಿ ಅಧಿಕಾರಿಗಳು ನಿಮ್ಮ ಮಾತನ್ನು ಕೇಳಿ, ಬೇಕಾದುದನ್ನು ಮಾಡಿಕೊಡುವರು. ಯಂತ್ರಗಳ ವ್ಯವಹಾರದಲ್ಲಿ ಹೆಚ್ಚು ಲಾಭ ಇರಲಿದೆ. ಈ ಸಮಯವು ಪ್ರೇಮಕ್ಕೆ ಒಳ್ಳೆಯದು. ನಿಮ್ಮಿಂದ ಯಾರಿಗೂ ಅಗೌರವ ಕೊಡುವುದು ಬೇಡ. ಸಹೋದ್ಯೋಗಿಗಳ ಕೆಲಸದಿಂದ ನಿಮಗೆ ಸಿಟ್ಟು ಬರಬಹುದು. ಅದನದನು ಅಲ್ಲಿಯೇ ನುಂಗಿಕೊಳ್ಳಿ. ನಿಮ್ಮ ನಿವೃತ್ತಿಯಿಂದ ಬೇಸರವಾಗುವುದು. ತಪ್ಪು ನಿರ್ಧಾರವನ್ನು ನಡುವೆ ಇವು ತೆಗೆದುಕೊಂಡು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು.

ಮಿಥುನ ರಾಶಿ : ಇಂದು ಹಿತಶತ್ರುಗಳು ನಿಮಗೆ ಬರುವ ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ಬಾರದೇ ಇರುವುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ನೀವು ಅಂದುಕೊಂಡಷ್ಟು ಲಾಭವು ಸಿಗುವತನಕ ಕಾರ್ಯವನ್ನು ನಿಲ್ಲಿಸಲಾರಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ. ಮಕ್ಕಳು ಶುಭಯೋಗವನ್ನು ಉಂಟು ಮಾಡುವರು. ದುಂದುವೆಚ್ಚವನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾದೀತು. ನೌಕರರಿಂದ ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಹೆಚ್ಚು ಕೇಳಿಬರಬಹುದು. ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸು ಕೂಡದು. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ನಿಮಗೆ ಜವಾಬ್ದಾರಿಯಿಂದ ತಲೆ ಭಾರವಾಗುವುದು.

ಕಟಕ ರಾಶಿ : ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಆಭರಣವನ್ನು ಖರೀದಿಸಲು ಸಾಲವನ್ನು ಮಾಡಬೇಕಾಗುವುದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿದ್ದು ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರಬಹುದು. ಸಹೋದರನ ಕಡೆಯಿಂದ ನಿಮಗೆ ಸಹಾಯವಾಗುವುದು. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಗೌರವ ಸಿಗಬಹುದು. ವ್ಯವಹಾರದ ಅಭಿವೃದ್ಧಿಯಾಗಿ ವಿದೇಶಿ ಸಂಪರ್ಕವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ನೀವೇ ಕಲ್ಪನೆಯನ್ನು ಮಾಡಿಕೊಂಡು ನಿಮ್ಮವರನ್ನು ದೂರವಿಡುವಿರಿ. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ.ಸಂಗಾತಿಯ ಮಾತುಗಳು ನಿಮಗೆ ಪಥ್ಯವಾಗಬಹುದು. ತಂದೆಗೆ ಇಂದು ನೀವು ಸಹಾಯ ಮಾಡುವಿರಿ. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು. ಅನಾಮಿಕರ ಜೊತೆ ಅತಿಯಾದ ಸಲುಗೆ ಬೇಡ. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು.

ಸಿಂಹ ರಾಶಿ : ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ನಿಮ್ಮ ಕಾರ್ಯಕ್ಕೆ ಸಹಾಯಕವಾದೀತು. ಶಕ್ತಿ‌ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಯಾರ ಬಗ್ಗೆಯೂ ಅನಗತ್ಯ ಟೀಕೆಗಳನ್ನು ಮಾಡುವುದು ಬೇಡ. ಕಳೆದ ದಿನಗಳ ಉದ್ಯಮ‌ಮತಗತು ಈಗಿನದ್ದನ್ನು ತೂಕ ಮಾಡುವಿರಿ. ಇಂದು ನಿಮ್ಮ ಸಂತೋಷವು ಕಡಿಮೆ ಇರಬಹುದು. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶವು ಸಿಗಲಿವೆ. ಆಶಾಭಂಗವಾಗುವ ಸಾಧ್ಯತೆ ಇದೆ. ಅವಕಾಶವನ್ನು ಸದುಪಯೋಗ ಮಾಡಿಕೊಂಡರೆ ಉತ್ತಮ ಭವಿಷ್ಯವು ಇರಲಿದೆ. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳು ಬರಬಹುದು.

ಕನ್ಯಾ ರಾಶಿ : ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಯಾರನ್ನೂ ನೋಯಿಸುವುದು ನಿಮಗೆ ಆಗದು. ಈ ಬಗ್ಗೆ ನೀವೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯ ಸಿಗುತ್ತದೆ. ಛಲಬಿಡದೇ ನಿಮ್ಮ ಸೋಲನ್ನು ಎದುರಿಸುವಿರಿ. ಈಗ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಬಹುದು. ಆಧ್ಯಾತ್ಮಿಕತೆಯ ಸೆಳೆತವು ಇರುವುದು. ನೆರೆಯವರ ವರ್ತನೆಯು ನಿಮ್ಮ ಸಿಟ್ಟಿಗೆ ಕಾರಣವಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಸಹೋದರನ ಪ್ರಗತಿಯಲ್ಲಿ ನೀವು ಸಂತೋಷ ಆಗಲಿದೆ. ಸಣ್ಣ ಉಳಿತಾಯವೂ ನಿಮಗೆ ಉಪಯೋಗವಾದೀತು.

ತುಲಾ ರಾಶಿ : ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ‌ ಸಣ್ಣ ಉಳಿತಾಯಕ್ಕೆ ಇಂದು ಬಹಳ ಬೆಲೆ‌ಬರಲಿದೆ. ಹೊಸ ಜವಾಬ್ದಾರಿಗಳ ನಿರೀಕ್ಷೆಯಲ್ಲಿ ಇರುವಿರಿ. ಶುಭಕಾರ್ಯಗಳಿಗೆ ಇಂದು ಸೂಕ್ತ ದಿನವಾಗಿದೆ. ಆಲಸ್ಯತನ ಮಾಡದೆ ಹಮ್ಮಿಕೊಂಡ ಕಾರ್ಯಗಳನ್ನು ಆರಂಭಿಸಿರಿ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ದೊರೆಯುವುದು. ಹಣವನ್ನು ನೀರಿನಂತೆ ಖರ್ಚು ಮಾಡುವುದು ಉತ್ತಮವಲ್ಲ. ವಿವೇಕಮತಿಯಾಗಿ ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವೃತ್ತಿಜೀವನದಲ್ಲಿ ಆನಂದದ ವಾತಾವರಣವು ಇರಲಿದೆ. ಹೊಸ ಉದ್ಯಮವಾದರೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವಿರಿ. ಹಿರಿಯ ಮೇಲೇ ಸಿಟ್ಟಾಗುವ ಸಾಧ್ಯತೆ ಇದೆ. ಮಾನಸಿಕವಾಗಿ ಉಂಟಾಗುವ ಕಿರಿಕಿರಿಗೆ ನಿಮಗೆ ಕೋಪ ಬರಬಹುದು.

ವೃಶ್ಚಿಕ ರಾಶಿ : ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಮತ್ತು ಮನಸ್ಸಿನಲ್ಲಿ ಮಾಡಿದ ಆಲೋಚನೆಗಳು ಸಾಕಾರಗೊಳ್ಳಲು ಧ್ಯಾನ ಮಾಡಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಉತ್ಸಾಹದಿಂದ ನಿಮ್ಮ ಇಂದಿನ ಕೆಲಸವು ಆಗಲಿದೆ. ಸಹೋದನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ನಿಮ್ಮವರಿಗೆ ಕಿರಿಕಿರಿ ಆಗಬಹುದು. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ರಾಜಕಾರಣಿಗಳಿಗೆ ಇಂದು ಸ್ಥಾನಮಾನಗಳು ಸಿಗಬಹುದು. ಇರುವ ಆದಾಯದ ಮೂಲವನ್ನು ಗಟ್ಟಿಮಾಡಿಕೊಳ್ಳಿ.‌ ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ. ಇಂದು ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ.

ಧನು ರಾಶಿ : ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಇಷ್ಟವಿಲ್ಲದೆ ಕಡೆ ವರ್ಗಾವಣೆ ಆಗಲಿದೆ. ಸಹೋದ್ಯೋಗಿಗಳ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ದುರಭ್ಯಾಸವು ನಿಮಗೆ ಹಣಕಾಸಿನ ನಷ್ಟವನ್ನು ಮಾಡಿಸೀತು. ಯಾರಿಂದಲಾದರೂ ಸಿಗುವ ಅಲ್ಪ ಸಹಾಯವೂ ಅಧಿಕವೆಂದು ಭಾವಿಸಿ. ಉತ್ತಮ‌ ಅವಕಾಶಗಳಿಂದ ನೀವು ವಂಚಿತರಾಗುವ ಸಾಧ್ಯತೆಬಿದೆ. ಕುಟುಂಬದ ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಸೋಲುವಿರಿ. ಅಪರಿಚಿತರ ಜೊತೆ ವ್ಯವಹಾರವನ್ನು ಮಾಡುವಾಗ ಗುಟ್ಟನ್ನು ಬಿಟ್ಟಕೊಡಬೇಡಿ. ಅತಿಥಿ ಸತ್ಕಾರವನ್ನು ಇಂದು ನೀವು ಮಾಡುವಿರಿ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು.‌ ನಕಾರಾತ್ಮಕ ಆಲೋಚನೆಗೆ ಅವಕಾಶವನ್ನು ಕೊಡಬೇಡಿ.

ಮಕರ ರಾಶಿ : ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಅನಗತ್ಯ ಹರಟೆಯಿಂದ ಈ ದಿನವನ್ನು ಕಳೆಯುವಿರಿ. ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಲಾಭವು ನಿಮ್ಮದಾಗಬಹುದು. ಸಮಯಾದ ಅಭಾವದಿಂದ ಇಂದಿನ‌ ಕೆಲಸಗಳು ಹಾಗೆಯೇ ಇರಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಯಾವುದನ್ನೂ ಪಳಗಿಸುವುದು ಸುಲಭದ ಕಾರ್ಯವಲ್ಲ. ಆಲಸ್ಯತನದಲ್ಲಿ ವೃತ್ತಿಯಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇದೆ. ನೀವು ಹಿರಿಯರ ಜೊತೆ ವಾಗ್ವಾದಕ್ಕೆ ಇಳಿಯುವಿರಿ. ಮನೆಯ ಕೆಲಸದಲ್ಲಿ ಸಮಯ ಕಳೆದಿದ್ದು ಗೊತ್ತಾಗದು. ಮಕ್ಕಳಿಗೆ ಪ್ರಿಯವಾದುದನ್ನು ಮಾಡುವಿರಿ. ಧನಸಹಾಯವನ್ನು ಮಾಡಲು ನಿಮಗೆ ಇಷ್ಟವಾಗದು. ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವಿರಿ. ನಿತ್ಯ ಕರ್ಮದಲ್ಲಿ ಸಮಯವು ವ್ಯತ್ಯಾಸವಾಗಲಿದೆ. ನಿಮಗೆ ಮಕ್ಕಳು ಅವಶ್ಯಕತೆ ಇರುವ ಹಣದ ಸಹಾಯವನ್ನು ಮಾಡುವರು.

ಕುಂಭ ರಾಶಿ : ಇಂದು ಸಂಪತ್ತಿನ ವ್ಯಯ ಆಗುವುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಕಾಲಾವಕಾಶದ ಕೊರತೆ ಇರುವುದು. ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಮಗ್ನರಾಗುವಿರಿ. ನಿಮ್ಮ ಒಳ್ಳೆಯತನವು ಈ ದಿನ ಮತ್ತೊಮ್ಮೆ ಸಾಬೀತಾಗುವುದು. ನೆರೆಹೊರೆಯವರಿಗೆ ಸ್ನೇಹದ ಹಸ್ತ ಚಾಚುವಿರಿ. ವಿವಾಹದ ಮಾತುಕತೆಗಳು ನಿಮ್ಮ ಖುಷಿಯನ್ನು ಹೆಚ್ಚಿಸಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ಅಪರಿಚಿತರ ಒಡನಾಟ ಹೆಚ್ಚು ಶ್ರೇಯಸ್ಕರ ಅಲ್ಲ. ನಿಮ್ಮ ಅನುಕೂಲಕ್ಕೆ ತಕ್ಕ ಕೆಲಸವನ್ನು ಮಾಡಿ. ಯಾರಾದರೂ ನಿಮ್ಮ ಬಳಿ ಕೆಲಸ ಮಾಡಿಕೊಡಲು ಸಹಾಯವನ್ನು ಕೇಳಬಹುದು. ಗೊತ್ತಿರುವುದನ್ನು ಹಂಚಿಕೊಳ್ಳಿ. ಒಂದು ಮಾತಿಗೆ ಹಲವಾರು ಅರ್ಥ. ಆಡುವಾಗ ಯೋಚನೆ ಇರಲಿ. ನೀವು ವಿರೋಧ ಮಾಡುವ ಯಾವ ಮಾತನ್ನು ಆಡುವುದು ಬೇಡ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು.

ಮೀನ ರಾಶಿ : ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ವಿವಾಹಯೋಗವು ಬಂದರೂ ನಿಮಗೆ ಅಂತಹ ಯೋಗ್ಯತೆಯ ಕೊರತೆ ಎದ್ದು ಕಾಣುವುದು. ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆ ಉಂಟಾಗುವುದು. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವುದು ಸೂಕ್ತವಲ್ಲ. ಆರೋಗ್ಯದ ಕಡೆ ಗಮನವಿರಲಿ. ನಂಬಿದ ದೈವವು ನಿಮಗೆ ಅನುಕೂಲವನ್ನೇ ಮಾಡುವುದು. ಅದನ್ನು ತಿಳಿಯುವ ದೃಷ್ಟಿ ಬೇಕು. ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವು ಇರುವುದು. ಸಂಗಾತಿಗೆ ನೀವು ಸುಳ್ಳು ಹೇಳಿ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಯಾರ ಮೇಲೂ ಪಕ್ಷಪಾತ ಮಾಡದೇ ಇರಬೇಕಾಗುವುದು. ನಿಮ್ಮ ನಿರೀಕ್ಷೆ ಸಂಪೂರ್ಣ ಸರಿಯಾಗದು. ವೃತ್ತಿಯ ಕೆಲಸಗಳ ನಡುವೆ ಕುಟುಂಬವನ್ನು ಮರೆತಿರುವಿರಿ. ಮಾತನ್ನು ನೀವು ಇಂದು ಕಡಿಮೆ ಮಾಡಿದ್ದೀರಿ. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು.

Ad
Ad
Nk Channel Final 21 09 2023