ಗಣೇಶ ಚತುರ್ಥಿ ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ದಿನದಂದು ಗಣೇಶನ ಪೂಜೆ ನಡೆಯುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಒಂದು ದಿನ, ಮೂರು ದಿನ, ಐದು ದಿನ ಹಾಗೂ ಏಳು ದಿನ ಸೇರಿದಂತೆ ತಮಗೆ ಅನುಕೂಲಕ್ಕೆ ತಕ್ಕಂತೆ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವುದು ವಾಡಿಕೆ.
ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಸರ್ಕಾರ ಆಚರಣೆಗೆ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಕಾರಣ ಈ ಮಾಹಾಮಾರಿಯಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಗಣೇಶನ ಪೂಜೆ ಮಾಡುತ್ತಾ ಲೋಕ ಕಲ್ಯಾಣಕ್ಕಾಗಿ ಬೇಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಬಾರಿ ಚೌತಿ ಆಚರಣೆ ಮಾಡಬೇಕೆಂದು ಕಳಕಳಿ ವಿನಂತಿ.
ಒಟ್ಟಿನಲ್ಲಿ ಈ ಬಾರಿ ಗಣೇಶೋತ್ಸವ ಪ್ರತಿಯೊಬ್ಬರ ಬಾಳಲ್ಲಿ ಬೆಳಕು ನೀಡಲಿ. ಕಷ್ಟಗಳು ದೂರವಾಗಿ ಸಂತೋಷದ ಹೊನಲು ನಮ್ಮೊಳಗೆ ಮೂಡಲಿ. ರೈತ ಸಂಕುಲ ಸಂತೋಷದಿಂದ ಇರಲಿ ಎಂದು ಆಶಿಸುತ್ತಾ ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
Ad