Bengaluru 29°C
Ad

ಇಂದು ಗಣೇಶ ಚತುರ್ಥಿಯಂದು ರಾಶಿ ಪ್ರಕಾರ ಈ ಶ್ಲೋಕ ಹೇಳಿ, ನೆಮ್ಮದಿ ಸಿಗುತ್ತೆ

ಮೇಷ ರಾಶಿಯವರು “ಓಂ ವಕ್ರತುಂಡಾಯ ಹೂಂ” ಅಥವಾ “ಓಂ ವರದಾಯ ನಮಃ” ಎಂಬ ಮಂತ್ರಗಳನ್ನು ಪಠಿಸಬೇಕು. ಇದರಿಂದ ಜೀವನದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ಜೊತೆಗೆ ಕೆಲ ದೋಷಗಳಿಂದ ಸಹ ಮುಕ್ತಿ ಪಡೆಯಬಹುದು.

ಮೇಷ ರಾಶಿ: ಮೇಷ ರಾಶಿಯವರು “ಓಂ ವಕ್ರತುಂಡಾಯ ಹೂಂ” ಅಥವಾ “ಓಂ ವರದಾಯ ನಮಃ” ಎಂಬ ಮಂತ್ರಗಳನ್ನು ಪಠಿಸಬೇಕು. ಇದರಿಂದ ಜೀವನದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ಜೊತೆಗೆ ಕೆಲ ದೋಷಗಳಿಂದ ಸಹ ಮುಕ್ತಿ ಪಡೆಯಬಹುದು.

ವೃಷಭ ರಾಶಿ: ವೃಷಭರಾಶಿಯವರು ಗಣೇಶ ಚತುರ್ಥಿ ಹಬ್ಬದಂದು “ಓಂ ವಕ್ರತುಂಡಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ.

ಮಿಥುನ ರಾಶಿ: ಈ ರಾಶಿಯವರು ಓಂ ಹೀ ಗ್ರೀನ್ ಹೀ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ 7 ಜನ್ಮಗಳಷ್ಟು ಪುಣ್ಯ ಲಭಿಸುತ್ತದೆ. ಅಲ್ಲದೇ, ಸಂಪತ್ತು ಸಹ ಲಭಿಸುತ್ತದೆ.

ಕಟಕ ರಾಶಿ: ಈ ಹಬ್ಬದ ದಿನ ಕಟಕ ರಾಶಿಯವರು”ಓಂ ಸುಮಂಗಲಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರು ಈ ಹಬ್ಬದ ದಿನ “ಓಂ ಗಂ ಗಣಪತ್ಯೇ ನಮಃ” ಅಥವಾ “ಶ್ರೀ ಗಣೇಶಾಯ ನಮಃ” ಎಂಬ ಮಂತ್ರಗಳನ್ನು ಪಠಿಸಬೇಕು. ಇದರಿಂದ ನಿಮ್ಮ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಕನ್ಯಾ ರಾಶಿ: ಕನ್ಯಾ ರಾಶಿಯವರು ಓಂ ಚಿಂತಾಮನ್ಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಕೆಲಸಗಳಿಗೆ ಇದ್ದ ಅಡೆ-ತಡೆಗಳು ನಿವಾರಣೆ ಆಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಸಹ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರು “ಓಂ ಗುಂ ಗಣಪತೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು ಎನ್ನಲಾಗುತ್ತದೆ. ಇದರಿಂದ ನಿಮ್ಮ ಕಷ್ಟಗಳು ಸಹ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಪ್ರತಿನಿತ್ಯ ಗಣೇಶ ಪೂಜೆಯ ಸಮಯದಲ್ಲಿ “ಓಂ ಗಣ ಗಣಪತಯೇ ನಮಃ” ಅಥವಾ “ಓಂ ಅಂತರಿಕ್ಷಾಯ ಸ್ವಾಹಾ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಯವರು ಪ್ರತಿದಿನ “ಓಂ ವಕ್ರತುಂಡಾಯ ನಮಃ” ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಯಶಸ್ಸು ಸಹ ನಿಮ್ಮನೇ ಹುಡುಕಿಕೊಂಡು ಬರುತ್ತದೆ ಎನ್ನಲಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರು ಓಂ ಗಣಪತ್ಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಏನಾದರೂ ತೊಂದರೆಗಳಿದ್ದರೆ ಅದಕ್ಕೂ ಮುಕ್ತಿ ಸಿಗುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರು “ಓಂ ನಮೋ ಭಗವತೇ ಗಜಾನನಾಯ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಹಣಕಾಸಿನ ಸಮಸ್ಯೆಗಳಿದ್ದರೆ ಅದಕ್ಕೂ ಸಹ ಮುಕ್ತಿ ಸಿಗುತ್ತದೆ.

ಮೀನ ರಾಶಿ: ಮೀನ ರಾಶಿಯವರು ಪ್ರತಿನಿತ್ಯ “ಓಂ ಗಣ ಮುಕ್ತಯೇ ಫಟ್” ಎಂಬ ಮಂತ್ರವನ್ನು ತಪ್ಪದೇ ಪಠಿಸಬೇಕು. ‘ಇದು ನಿಮ್ಮ ಜೀವನದಲ್ಲಿರುವ ನೋವುಗಳನ್ನ ಕಡಿಮೆ ಮಾಡುತ್ತದೆ. ಹಾಗೆಯೇ, ಹಣಕಾಸಿನ ಲಾಭವಾಗುತ್ತದೆ.

Ad
Ad
Nk Channel Final 21 09 2023