ಮೇಷ ರಾಶಿ: ನಿಮ್ಮ ನಿಜವಾದ ಪ್ರಯತ್ನಕ್ಕೆ ದೈವವೂ ಸಹಾಯ ಮಾಡುವುದು. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಇಂದು ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತಸ್ಥಾನವು ಸಿಗಲಿದೆ. ಎಲ್ಲಿಯೋ ಹೂಡಿಕೆ ಮಾಡಿ ನಷ್ಟಮಾಡಿಕೊಳ್ಳುವಿರಿ. ಯಾರ ಮೇಲೂ ದೂರನ್ನು ಹಾಕುವುದು ಬೇಡ. ಮನೆಯಿಂದ ದೂರವಿರುವ ಉದ್ಯೋಗವು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದ ತಾಯಿಗೆ ಬೇಸರವಾಗಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಭೂವಿಚಾರದ ಕಾನೂನು ಸಮರದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು.
ವೃಷಭ ರಾಶಿ: ಆನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಗಿಂತ ಮಾನಸಿಕ ನೆಮ್ಮದಿ ಧೈರ್ಯಗಳು ಉಪಯೋಗಕ್ಕೆ ಬರುವುದು. ಬೇರೆಯವರು ಖುಷಿಪಡುವಂತೆ ಮಾತನಾಡುವಿರಿ. ಆರ್ಥಿಕ ಸಹಾಯವು ಸಿಗದೇ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದೇ ಇದ್ದೀತು. ಚರ ಆಸ್ತಿಯನ್ನು ಕಳೆದುಕೊಳ್ಳಬಹುದು. ಯಾರಾದರೂ ನಿಮಗೆ ಸ್ಫೂರ್ತಿಯಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಇರದು. ಸ್ಥಾನವನ್ನು ಉಳಿಸಿಕೊಳ್ಳಲು ಜವಾಬ್ದಾರಿಯ ಕೆಲಸವನ್ನು ನಿರ್ವಹಿಸಬೇಕಾಗುವುದು. ಶುಭಾವಾರ್ತೆಯು ನಿಮಗೆ ನೆಮ್ಮದಿಯನ್ನು ತಂದೀತು. ಪ್ರಯಾಣದ ವಿಚಾರದಲ್ಲಿ ನಿಮಗೆ ನಿರಾಸಕ್ತಿ ಇರಲಿದೆ. ಬಂಧುಗಳ ಭೇಟಿಯು ಸುಖವನ್ನು ಕೊಡುವುದು. ಒಂದೇ ವಿಚಾರವನ್ನು ಮನನ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ನಿಮಗಾದ ನೋವಿನಿಂದ ಇತರರಿಗೂ ನೋವಾಗುವುದು.
ಮಿಥುನ ರಾಶಿ; ಉದ್ಯಮದಿಂದ ಆದ ಲಾಭಕ್ಕೆ ನಿಮಗೆ ಆದಾಯ ಸಿಗುವುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಯಾರದೋ ತಪ್ಪಿಗೆ ನೀವು ಬಲಿಯಾಗಬೇಕಾಗುವುದು. ಭೋಗವಸ್ತುಗಳನ್ನು ಖರೀದಿಸಿದರೂ ನಿಮಗೆ ಸಂತೃಪ್ತಿ ಸಿಗದು. ಜೀವನಕ್ಕೆ ಬೇಕಾದುದನ್ನು ಸ್ನೇಹಿರಿಂದ ಪಡೆಯುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ ಆಗುವುದು. ಮನೋರಂಜನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಯಂತ್ರದ ಮಾರಾಟದಿಂದ ಲಾಭವಿರಲಿದೆ. ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಇನ್ನೊಬ್ಬರನ್ನು ಗೌರವಿಸಿದರೆ ನೀವೂ ದೊಡ್ಡವರಾಗುವಿರಿ.
ಕರ್ಕಾಟಕ ರಾಶಿ: ನಿಮಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು.
ಸಿಂಹ ರಾಶಿ : ನಿಮಗೆ ಇಂದು ಏನಾದರೂ ಹೊಸತನ್ನು ಮಾಡುವ ಉದ್ದೇಶವಿರುವುದು. ಇಂದು ನಿಮ್ಮ ಕರ್ತವ್ಯಗಳನ್ನು ಮರೆಯು ಸಾಧ್ಯತೆ ಇದ್ದು, ಯಾರೋ ಅದನ್ನು ನೆನಪಿಸಬೇಕಾದೀತು. ಹೂಡಿಕೆಯನ್ನು ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟ ಮಿತ್ರರ ಜೊತೆ ಸಮಯವನ್ನು ಕಳೆಯುವಿರಿ. ಅಸೂಯೆಯ ಕಾರಣ ಯಾವ ಸಂತೋಷವನ್ನೂ ನೀವು ಪೂರ್ಣವಾಗಿ ಅನುಭವಿಸಲಾರಿರಿ. ಬಂಧುಗಳ ಮಾತು ನಿಮ್ಮ ಸಿಟ್ಟಿಗೆ ಕಾರಣವಾಗಬಹುದು.
ಮಕರ ರಾಶಿ : ನಿಮ್ಮ ಮಕ್ಕಳನ್ನು ಸರಿಯಾದ ಮಾರ್ಗಕ್ಕೆ ತರಲು ಸಮಯವು ಬೇಕಾಗುವುದು. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಸಂಗಾತಿಯ ನೋವನ್ನು ಕೇಳುವಷ್ಟು ತಾಳ್ಮೆ ಇಲ್ಲವಾದೀತು. ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ಆರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ಯಾರದೋ ತಪ್ಪಿಗೆ ಬಲಿಯಾಗಬೇಕಾಗುವುದು. ನಿಮ್ಮ ನಿರ್ಬಂಧಗಳು ಕುಟುಂಬದವರಿಗೆ ಇಷ್ಟವಾಗದು. ಕಛೇರಿಯ ಒತ್ತಡದ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ.