ಸಿಂಹ ರಾಶಿ : ವಿದ್ಯಾರ್ಥಿಗಳ ಕನಸು ನನಸಾಗುವುದು. ಯಾರ ವ್ಯಕ್ತಿತ್ವವನ್ನೂ ನೋಡಿದ ಮಾತ್ರಕ್ಕೆ ಅಳೆಯುವಲ್ಲಿ ಸೋಲುವಿರಿ. ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಭೂ ಕಲಹವು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತ ಜೊತೆ ಪ್ರವಾಸವನ್ನು ಯೋಜಿಸುವಿರಿ. ಮನೆಯ ವಾತಾವರಣದ ಕಾರಣ ಕಛೇರಿಯಲ್ಲಿ ಕೆಲಸದ ಮಾನಸಿಕತೆ ಇರದು. ಅಪರಿಚಿತರು ನಿಮ್ಮಿಂದ ಧನಸಹಾಯವನ್ನು ನಿರೀಕ್ಷಿಸುವರು. ಉದ್ಯೋಗಿಗಳಿಗೆ ಖುಷಿ ಆಗಿವಂತೆ ಮಾಡುವಿರಿ.
ಕನ್ಯಾ ರಾಶಿ : ನೀವು ನಿಮ್ಮ ಉದ್ಯೋಗದಲ್ಲಿ ಗಟ್ಟಿತನವನ್ನು ಉಳಿಸಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು. ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ಬೈಗುಳಗಳು ಸಿಗಬಹುದು. ನಿಮ್ಮ ಕಾರ್ಯದ ಒತ್ತಡದಿಂದ ಧಾರ್ಮಿಕ ಕಾರ್ಯಗಳಿಗೆ ಸಮಯ ಸಾಲದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿ. ಇಲ್ಲವಾದರೆ ಗೌರವವು ಕಡಿಮೆ ಆದೀತು. ನೀವು ಕೊಟ್ಟ ವಸ್ತುವನ್ನು ಮರೆತಿದ್ದು ಇಂದು ನೆನಪಾಗಿ ಅದನ್ನು ಹಿಂಪಡೆಯಲು ಪ್ರಯತ್ನಿಸುವಿರಿ.
ತುಲಾ ರಾಶಿ : ಅಧಿಕಾರದಲ್ಲಿ ಇದ್ದರೂ ಅದನ್ನು ನಿರ್ವಹಿಸುವ ಕ್ರಮವೂ ಗೊತ್ತಿರಬೇಕು. ಅತಿಥಿಗಳ ಆಗಮನದಿಂದ ನಿಮಗೆ ಕಷ್ಟವಾಗಬಹುದು. ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ. ನಿಮಗೆ ಇರುವ ಕಾರ್ಯಕುಶಲತೆಯನ್ನು ಮುಚ್ಚಿಕೊಳ್ಳುವರು. ಇನ್ನೊಬ್ಬರಿಗೆ ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಖಾಸಗಿತನವು ಹಿತಶತ್ರುಗಳಿಂದ ಬಯಲಾಗಬಹುದು. ಮನೆಯ ಕೆಲಸಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು. ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ಒಳ್ಳೆಯ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ.
ವೃಶ್ಚಿಕ ರಾಶಿ : ನಿಮ್ಮ ಪ್ರತಿಭೆಯ ಪರಿಚಯು ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಮಕ್ಕಳಿಂದ ನಿಮಗೆ ಶ್ರೇಯಸ್ಸು ಸಿಗುವುದು. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯವನ್ನು ನೀವು ನಿರೀಕ್ಷಿಸುವಿರಿ. ಮಾತಿನಲ್ಲಿ ಹಿಡಿತವಿರಲಿ.
ಕುಂಭ ರಾಶಿ : ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಜಯವು ಸಿಗಲಿದೆ. ಯಾದ್ದಾದದರೂ ಕಣ್ತಪ್ಪಿಸಿ ಏನನ್ನಾದರೂ ಮಾಡಲಾಗದು. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು.
ಮಕರ ರಾಶಿ : ಹಳೆಯ ವಸ್ತುಗಳನ್ನು ಮಾರಾಡ ಮಾಡಿದರೆ ಉತ್ತಮ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ.ಯಾರ ಮಾತನ್ನೂ ಕೇಳುವ ತಾಳ್ಮೆ ಕಡಿಮೆ ಆಗಬಹುದು. ನಿಮ್ಮ ಹೇಳಿಕೆಯನ್ನು ಬದಲಾಯಿಸವುದು ಬೇಡ. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬರದಿರುವುದು ಬೇಸರವನ್ನು ತರಿಸುವುದು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು.
ಮೀನ ರಾಶಿ : ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಇಂದು ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ಮಾತಿನಲ್ಲಿ ಹಿಡಿತವಿರಲಿ. ಒಳ್ಳೆಯ ಕರ್ಮದಿಂದ ಪುಣ್ಯದ ಫಲವನ್ನು ಸಂಪಾದಿಸುವಿರಿ.