ನವದೆಹಲಿ: ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ ಕೆಲವು ಆ್ಯಪಲ್ ಬಳಕೆದಾರರಿಗೆ ಹಲವು ಎಚ್ಚರಿಕೆಗಳನ್ನು ನೀಡಿದೆ. ಆಗಷ್ಟ್ 2 ರಂದು ಹೊರಬಿದ್ದಿರುವ CERT-Inನ ಎಚ್ಚರಿಕೆ ಆ್ಯಪಲ್ ಫೋನ್ನಲ್ಲಿ ಹಲವು ಭದ್ರತೆಗೆ ಸಂಬಧಿಸಿದ ಹಲವು ಸಮಸ್ಯೆಗಳು ಉಂಟಾಗಲಿವೆ. ಐಫೋನ್, ಐಪ್ಯಾಡ್, ಮ್ಯಾಕ್ಸ್ ಸೇರಿ ಆ್ಯಪಲ್ನ ಹಲವು ಉತ್ಪನ್ನಗಳಿಗೂ ಈ ಸಮಸ್ಯೆ ಕಾಡಲಿದೆ.
ಆ್ಯಪಲ್ನ ಹಲವು ರೀತಿಯ ಸಾಫ್ಟ್ವೇರ್ಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳಲಿದೆ
iOS ಮತ್ತು iPAD Os ವರ್ಷನ್ನ 17.6 ಮತ್ತು
macOS ವರ್ಷನ್ನ ಪ್ರಯಾರ್ 14.6
watchOs ವರ್ಷನ್ ಪ್ರಯರ್ 10.6
tvOS: 17.6
vision os 1.3
Safari 17.6
CERT-In ಈ ಬಗೆಯ ಸಾಫ್ಟ್ವೇರ್ ಹೊಂದಿರುವ ಆ್ಯಪಲ್ ಉತ್ಪನ್ನಗಳು ಸದ್ಯ ಅಪಾಯದಲ್ಲಿವೆ ಎಂದು ಹೇಳಿದೆ. ಈ ರೀತಿಯ ಸಾಫ್ಟ್ವೇರ್ಗಳು ನಿಮ್ಮ ಡಿವೈಸ್ನಲ್ಲಿರುವ ಸೂಕ್ಷ್ಮ ಮಾಹಿತಿಗಳ ಮೇಲೆ ದಾಳಿಯಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.
ಆ್ಯಪಲ್ನಿಂದಲೂ ಗ್ರಾಹಕರಿಗೆ ಸೆಕ್ಯೂರಿಟಿ ಅಲರ್ಟ್
ಇನ್ನು CERT-In ಆ್ಯಪಲ್ ಬಳಕೆದಾರರಿಗೆ ಈಗಾಗಲೇ ಒಂದು ಸೂಚನೆಯನ್ನು ನೀಡಿದೆ, ಬಳಕೆದಾರರು ಕೂಡಲೇ ಸಾಫ್ಟ್ವೇರ್ ಅಪಡೇಟ್ ಮಾಡಿಕೊಳ್ಳಿ. ಈಗಾಗಲೇ ಆ್ಯಪಲ್ ಸಂಸ್ಥೆ ಅಪ್ಡೇಟ್ ಆಯ್ಕೆಯನ್ನು ಪೂರೈಸಿದೆ ಈ ಮೂಲಕ ನಿಮ್ಮ ಆ್ಯಪಲ್ ಉತ್ಪನ್ನದ ಭದ್ರತೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಕೂಡ ಹೇಳಿದೆ.
CERT-In ಜೊತೆಗೆ ಆ್ಯಪಲ್ ಕಂಪನಿಯೂ ಕೂಡ ತನ್ನ ಉತ್ಪನ್ನಗಳ ಬಳಕೆದಾರರಿಗೆ ಹಲವು ಎಚ್ಚರಿಕೆಯನ್ನು ನೀಡಿದೆ. ಸದ್ಯದಲ್ಲಿಯೇ ನಿಮ್ಮ ಐಫೋನ್, ಐಪ್ಯಾಡ್ನಂತಹ ಉತ್ಪನ್ನಗಳ ಮೇಲೆ ಸ್ಪೈವೇರ್, ಪೆಗಾಸಸ್ ಸ್ಪೈವೇರ್ ನಂತಹ ಸಾಫ್ಟ್ವೇರ್ಗಳು ದಾಳಿಯಿಡುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ಭಾರತವನ್ನು ಸೇರಿ ಒಟ್ಟು 150 ದೇಶಗಳಿಗೆ ರವಾನಿಸಿದೆ. ಸದ್ಯ ಸುಧಾರಿತ ಸ್ಪೈವೇರ್ಗಳು ಪ್ರಮುಖವಾಗಿ ಆ್ಯಪಲ್ ಉತ್ಪನ್ನಗಳನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನು ಹೊಂದಿವೆ.ಹೀಗಾಗಿ ಆ್ಯಪಲ್ ಬಳಕೆದಾರರು ಕೊಂಚ ಎಚ್ಚರಿಕೆಯಿಂದ ಇರೋದು ಒಳಿತು.