Ad

ಬೆಂಗಳೂರು ಕಂಪನಿಯ ಮಾನವರಹಿತ ಬಾಂಬ್‌ ವಿಮಾನದ ಹಾರಾಟ ಯಶಸ್ವಿ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್‌ಡಬ್ಲ್ಯುಡಿಎ) ಕಂಪನಿ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ "ಎಫ್‌ಡಬ್ಲ್ಯುಡಿ200ಬಿ' ಮಾನವರಹಿತ ಬಾಂಬ‌ರ್ ವಿಮಾನವು ತನ್ನ ಮೊದಲ ಪ್ರಾಯೋಗಿಕ ಯಶಸ್ವಿಯಾಗಿ ಹಾರಾಟವನ್ನು ನಡೆಸಿದೆ. 

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್‌ಡಬ್ಲ್ಯುಡಿಎ) ಕಂಪನಿ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ “ಎಫ್‌ಡಬ್ಲ್ಯುಡಿ200ಬಿ’ ಮಾನವರಹಿತ ಬಾಂಬ‌ರ್ ವಿಮಾನವು ತನ್ನ ಮೊದಲ ಪ್ರಾಯೋಗಿಕ ಯಶಸ್ವಿಯಾಗಿ ಹಾರಾಟವನ್ನು ನಡೆಸಿದೆ.

ಈ ವೇಳೆ ಮಾತನಾಡಿದ ಕಂಪನಿಯ ಸಿಇಒ ಸುಹಾಸ್ ತೇಜಸ್‌ಕಂದ ಅವರು, ಮಾನವರಹಿತ ಬಾಂಬರ್‌ ವಿಮಾನವನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡುವ ಕುರಿತು ಚರ್ಚೆ ನಡೆದಿದೆ ಎಂದರು. ಈ ವಿಮಾನವು ಮಧ್ಯಮ ಎತ್ತರದಲ್ಲಿ (15000 ಅಡಿ) ದೀರ್ಘಾವಧಿ ಹಾರಾಟ ನಡೆಸುವ ವರ್ಗದಲ್ಲಿ ಬರುತ್ತದೆ. ಸರ್ವೇ ಕ್ಷಣೆಗೆ ಆಪ್ಟಿಕಲ್ ಪೇಲೋಡ್ ಹಾಗೂ ವಾಯುದಾಳಿ ಮತ್ತು ಬಾಂಬ್ ದಾಳಿಗೆ ಕ್ಷಿಪಣಿ ಯಂತಹಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದರು.

ಈ ವಿಮಾನದ ವಿನ್ಯಾಸ, ಚೌಕಟ್ಟು, ಪ್ರೊಪಲ್ಸನ್ ಸಿಸ್ಟಂ, ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಾನಿಕ್ಸ್‌ಗಳನ್ನು ಸಂಪೂರ್ಣ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಎಲ್ಲವನ್ನೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪನಿಯ 1.5 ಎಕರೆ ಜಾಗದಲ್ಲಿರುವ 12 ಸಾವಿರ ಚದರಡಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆಮಿ ಕಂಡಕ್ಟ‌ಹೊರತುಪಡಿಸಿ ಸಂಪೂರ್ಣ ಸ್ವದೇಶಿ ನಿರ್ಮಿತ ಏರ್‌ಕ್ರಾಫ್ಟ್ ಇದಾಗಿದೆ. ಸದ್ಯ ಭಾರತ ಆಮದು ಮಾಡಿಕೊಳ್ಳುತ್ತಿರುವ ಡೋನ್, ಸಮರ ವಿಮಾನಗಳಿಗೆ ಹೋಲಿಸಿದರೆ ತೀರಾ ಕಡಿಮೆ ಅಂದರೆ ₹25 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು. ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ: ತಾಸುಗಳ ಕಾಲ 800 ಕಿ.ಮೀ.ವರೆಗೆ ಈ ವಿಮಾನ ಹಾರಾಡಬಲ್ಲದು. ಇದರ ಹಾರಾಟಕ್ಕೆ 300 ಮೀ.ನಷ್ಟು ಕಡಿಮೆ ರನ್‌ವೇ ಸಾಕು ಎಂದು ಸುಹಾಸ್ ವಿವರಿಸಿದರು. ಇದನ್ನು ಭಾರತೀಯ ಸೈನ್ಯವು ಸೇರ್ಪಡೆ ಮಾಡಿಕೊಂಡಲ್ಲಿ ಅಮೆರಿಕ, ಇಸ್ರೇಲ್ ಮತ್ತಿತರ ರಾಷ್ಟ್ರಗಳಿಂದ ವಿಮಾನ, ಡೋನ್ ಆಮದು ಹಾಗೂ ಹೆಚ್ಚುವರಿ ವೆಚ್ಚ ತಗ್ಗಲಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಸೇನೆಗೆ ಸೇರ್ಪಡೆ ಆಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Ad
Ad
Nk Channel Final 21 09 2023