Bengaluru 22°C
Ad

ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಉದ್ಘಾಟನೆ

ಗ್ರಾಹಕ ಮೊದಲು ಎಂಬ ತತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿದೆ.

ನವದೆಹಲಿ: ಗ್ರಾಹಕ ಮೊದಲು ಎಂಬ ತತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿದೆ.

ಟೊಯೊಟಾಗೆ ಪ್ರತ್ಯೇಕವಾದ “ಹೈ ಕ್ವಾಲಿಟಿ ಪ್ರಿಶಿಯಸ್ ಕ್ಲೀನಿಂಗ್” ‘ಮಾರು ಮಾರು’ ಸಿಗ್ನೇಚರ್‌ನೊಂದಿಗೆ ಟಿಯುಸಿಒ ವಹಿವಾಟು ಭಾರತದಾದ್ಯಂತ ಟೊಯೊಟಾ ಗ್ರಾಹಕರಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಸಿದ ಕಾರು ಮಾರುಕಟ್ಟೆಯನ್ನು ಬೆಳೆಸುವ ಟಿಕೆಎಂನ ಬದ್ಧತೆಯನ್ನು ಬಲಪಡಿಸುತ್ತದೆ.

ಹೆಚ್ಚುವರಿಯಾಗಿ ಮಾರಾಟದ ನಂತರದ ಸೇವೆಯ ಕಡೆಗೆ ನಿಜವಾದ ಟೊಯೊಟಾ ಗ್ರಾಹಕ ಕೇಂದ್ರಿತ ವಿಧಾನವನ್ನು ಪ್ರದರ್ಶಿಸುತ್ತದೆ. ಟಿಯುಸಿಒ ಪ್ರಮಾಣೀಕರಿಸಿದ ಬಳಸಿದ ಕಾರುಗಳಿಗೆ ದೇಶಾದ್ಯಂತ ಯಾವುದೇ ಟೊಯೊಟಾ ಸೇವಾ ಕೇಂದ್ರಗಳಲ್ಲಿ 30,000 ಕಿ.ಮೀ, ಅಥವಾ 2 ವರ್ಷಗಳು ಮತ್ತು 3 ಉಚಿತ ಸೇವೆಗಳ ವಾರಂಟಿಯನ್ನು ನೀಡಲಾಗುತ್ತದೆ. ಮಾರಾಟಗಾರರಿಗೆ, ಶಾಂತಿಯುತ ಮತ್ತು ಕಿರಿಕಿರಿ ಇಲ್ಲದ ಮಾರಾಟ ಪ್ರಕ್ರಿಯೆ ಜತೆಗೆ ಟುಕೊ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ನೀಡುತ್ತದೆ.

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ತಕಾಶಿ ತಕಾಮಿಯಾ ಮಾತನಾಡಿ, ಯೂಸ್ಡ್ ಕಾರ್ ಬ್ಯುಸಿನೆಸ್ ಭಾರತದಲ್ಲಿ ಟೊಯೊಟಾದ ಒಟ್ಟಾರೆ ವ್ಯವಹಾರ ಮತ್ತು ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿದೆ. ಇದು ‘ಮೊಬಿಲಿಟಿ ಫಾರ್ ಆಲ್ ‘ ಎಂಬ ನಮ್ಮ ದೃಷ್ಟಿಕೋನದೊಂದಿಗೆ ನಿಕಟವಾಗಿ ಹೊಂದಿಕೆಯಾಗಿದೆ. ಆದ್ದರಿಂದ ನವದೆಹಲಿಯಲ್ಲಿ ನಮ್ಮ ಮೊದಲ ಯೂಸ್ಡ್ ಕಾರ್ ಔಟ್ಲೆಟ್ ಉದ್ಘಾಟನೆಯೊಂದಿಗೆ ಟಿಯುಸಿಒದ ವಿಸ್ತರಣೆಯು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಗ್ರಾಹಕರ ತೃಪ್ತಿಗೆ ನಮ್ಮ ಸಮರ್ಪಣೆಗೆ ಉದಾಹರಣೆಯಾಗಿದೆ ಎಂದಿದ್ದಾರೆ.

ಭಾರತೀಯ ಬಳಸಿದ ಕಾರು ಮಾರುಕಟ್ಟೆಯು ಶೇ.8% ಸಿಎಜಿಆರ್‌ ನಷ್ಟು ಬೆಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಹೊಸ ಕಾರು ಮಾರುಕಟ್ಟೆಯ ಗಾತ್ರಕ್ಕಿಂತ 1.3 ಪಟ್ಟು ದೊಡ್ಡದಾಗಿದೆ. ಈ ವಲಯವು ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ

Ad
Ad
Nk Channel Final 21 09 2023
Ad