ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರವೇಶ ಮಾಡುವ ಮುನ್ನವೇ 8 ಧೈರ್ಯವಂತ ಪ್ರಾಣಿಗಳ ಡಿಟೇಲ್ ಇಲ್ಲಿದೆ. ಈ ಪ್ರಾಣಿಗಳ ಬಾಹ್ಯಾಕಾಶ ಪ್ರಯಾಣ ಮಾನವನ ಬಾಹ್ಯಾಕಾಶದ ಸಂಶೋಧನೆಗೆ ಹಾದಿ ಮಾಡಿಕೊಟ್ಟವು.
ಚಿಂಪಾಂಜಿ ಹ್ಯಾಮ್
ಹ್ಯಾಮ್ ಬಾಹ್ಯಾಕಾಶಕ್ಕೆ ತೆರಳಲು ತರಬೇತಿ ಪಡೆದ ಮೊದಲ ಚಿಂಪಾಜಿ, 1961ರಲ್ಲಿ ಮರ್ಕ್ಯುರಿ ರೆಡ್‌ಸ್ಟೋನ್ ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ಹ್ಯಾಮ್ ಪ್ರಯಾಣಿಸಿತು. ಹ್ಯಾಮ್‌ನ ಯಶಸ್ವಿ ಪಯಣವೂ ಗಗನಯಾತ್ರೆಯ ತರಬೇತಿ ಹಾಗೂ ಬಾಹ್ಯಾಕಾಶ ನೌಕೆಯ ವ್ಯವಸ್ಥೆಯನ್ನು ಪರೀಕ್ಷಿಸಲು ಸಹಾಯ ಮಾಡಿತು.
ಬೆಲ್ಕಾ ಮತ್ತು ಶೆಲ್ಕಾ
ಸೋವಿಯತ್ ಒಕ್ಕೂಟ ರಷ್ಯಾದ ಬಾಹ್ಯಾಕಾಶ ಸಂಸ್ಥೆಯೂ 1960ರಲ್ಲಿ ಬೆಲ್ಕಾ ಮತ್ತು ಶೆಲ್ಕಾ ಎಂಬ ಎರಡು ಶ್ವಾನಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇವರೆಡು ಅಲ್ಲಿ ಭೂಮಿಯ ಕಕ್ಷೆಯನ್ನು ಸುತ್ತಿ ಮರಳಿ ಬಂದವು. ಇವು ಬಾಹ್ಯಾಕಾಶಕ್ಕೆ ಹೋಗಿಯೂ ಜೀವಂತವಾಗಿ ವಾಪಸ್ ಬಂದ ಮೊದಲ ಪ್ರಾಣಿಗಳಾಗಿವೆ.
ದಿ ಲೈಕಾ
ಇದು ಕೂಡ ಸೋವಿಯತ್ ಒಕ್ಕೂಟವೂ 1957ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದ ಶ್ವಾನವಾಗಿದೆ. ಇದು ಬಾಹ್ಯಾಕಾಶದಲ್ಲಿ ಸುತ್ತು ಹೊಡೆದ ಮೊದಲ ಶ್ವಾನ ಹಾಗೂ ಮೊದಲ ಪ್ರಾಣಿ ಎಂಬ ಹೆಗ್ಗಳಿಕೆ ಗಳಿಸಿದೆ. ಸ್ಪುಟ್ನಿಕ್ 2 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಲೈಕಾ ಪ್ರಯಾಣವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.
ಅಲ್ಬರ್ಟ್ ಮಂಕಿ 2
1959ರಲ್ಲಿ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಅಲ್ಬರ್ಟ್ ಮಂಕಿ-2 ಎಂಬ ಕೋತಿಯನ್ನು ಅಮೆರಿಕಾದ ಬಾಹ್ಯಾಕಾಶ ನೌಕೆ ಯುಎಸ್‌ವಿ2ನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಈ ಕೋತಿಯ ಬಾಹ್ಯಾಕಾಶ ಪ್ರಯಾಣವೂ ಜೀವಿಗಳ ಮೇಲೆ ಅಂತರಿಕ್ಷದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು.
ಫೆಲಿಸಿಟ್ ದಿ ಕ್ಯಾಟ್
ಫೆಲಿಸಿಟ್ ಬಾಹ್ಯಾಕಾಶವನ್ನು ಪ್ರವೇಶಿಸಿದ ಮೊದಲ ಹಾಗೂ ಏಕೈಕ ಬೆಕ್ಕು. ಫ್ರಾನ್ಸ್ ಬಾಹ್ಯಾಕಾಶ ಸಂಸ್ತೆ 1963ರಲ್ಲಿ ತನ್ನ ಬಾಹ್ಯಾಕಾಶ ನೌಕೆಯಲ್ಲಿ ಫೆಲಿಸಿಟ್ ಬೆಕ್ಕನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಈ ಬೆಕ್ಕಿನ ಪ್ರಯಾಣವೂ ಬಾಹ್ಯಾಕಾಶದಲ್ಲಿ ಜೀವ ವ್ಯವಸ್ಥೆಯ ಆಗುವ ಪರಿಣಾಮವನ್ನು ಅಧ್ಯಯನ ಮಾಡಲು ಸಹಾಯ ಮಾಡಿತ್ತು.
ಸ್ಕೈರಲ್ ಮಂಕಿ ಮಿಸ್ ಬೇಕರ್( ಅಳಿಲು ಜಾತಿಯ ಕೋತಿ)
ಸ್ಕೈರಲ್ ಮಂಕಿ ಮಿಸ್ ಬೇಕರ್‌ನನ್ನು 1959ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಯ್ತು. ಜುಪಿಟರ್ ಐಆರ್‌ಬಿಎಂ ರಾಕೆಟ್‌ನಲ್ಲಿ ಇದು ಬಾಹ್ಯಾಕಾಶಕ್ಕೆ ಹಾರಿತ್ತು.
ಆಮೆಗಳು
1968ರಲ್ಲಿ ಸೋವಿಯತ್ ಬಾಹ್ಯಾಕಾಶ ಸಂಸ್ಥೆಯೂ ಝೋಂಡ್ 5 ಎಂಬ ಬಾಹ್ಯಾಕಾಶ ನೌಕೆಯಲ್ಲಿ ಆಮೆಯೊಂದನ್ನು ಮತ್ತು ಮಣ್ಣು ಹಾಗೂ ಹುಳುಗಳೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟಿತು. ಈ ನೌಕೆ ಆರು ದಿನ ಚಂದ್ರನ ಸುತ್ತ ಸುತ್ತ ಹಾಕಿ ಹಿಂದೂ ಮಹಾಸಾಗರದಲ್ಲಿ ಕ್ರ್ಯಾಶ್ ಲ್ಯಾಂಡ್ ಆಯ್ತು. ಆದರೂ ಇವುಗಳು ಬದುಕುಳಿದವು.
ಟಾರ್ಡಿಗ್ರೇಡ್‌ಗಳು
ಟಾರ್ಡಿಗ್ರೇಡ್ ಎಂಬ ಸೂಕ್ಷ್ಮ ರಚನೆಯ ಜೀವಿಗಳನ್ನು 2007ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಅವುಗಳು ಆ ಪ್ರದೇಶಕ್ಕೆ ಹೊಂದಿಕೊಂಡು ತೀವ್ರತರವಾದ ಪರಿಸ್ತಿತಿಯಲ್ಲೂ ಬದುಕುಳಿಯುವ ಗಮನಾರ್ಹ ಸಾಮರ್ಥ್ಯಕ್ಕೆ ಹೆಸರಾದವು.