ಭೂಮಿಗೆ ಹಾಗೂ ಭೂಚರಗಳಿಗೆ ಇಷ್ಟು ಆಪ್ತನಾಗಿರುವ ಚಂದ್ರನ ಬಗ್ಗೆ ಕುತೂಹಲದ ಅಂಶವೊಂದು ಬೆಳಕಿಗೆ ಬಂದಿದೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ.
ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಅಧ್ಯಯನ ಹೇಳಿದೆ. ಇದರಿಂದ ಆಗುವ ಪರಿಣಾಮ ಏನೆಂದರೆ, ಭೂಮಿಯಲ್ಲಿ ಇರುವ ಒಂದು ದಿನದ ಸಮಯದಲ್ಲಿ ಇದು ಬದಲಾವಣೆ ಆಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ. ನಿಮಗೆ ನೆನಪಿರಲಿ, 1.4 ಶತಕೋಟಿ ವರ್ಷಗಳ ಹಿಂದೆ, ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು ಎಂದು ಅಧ್ಯಯನವು ಹೇಳಿದೆ.
Ad