ದೆಹಲಿ: ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಯಿಂದಾಗಿ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ಸುನಿತಾ ವಿಲಿಯಮ್ಸ್ ಬೋನ್ ಲಾಸ್ ಸಮಸ್ಯೆಗೆ ಒಳಗಾಗಿದ್ದಾರೆ. ಈ ಮುನ್ನ ಅವರು ಜೂನ್ 14ರಂದು ಭೂಮಿಗೆ ವಾಪಸಾಗಬೇಕಿತ್ತು. ಬಳಿಕ ಜೂನ್ 26ಕ್ಕೆ ಅದು ಶಿಫ್ಟ್ ಆಗಿತ್ತು. ಈಗ ಅವರು ಭೂಮಿಗೆ ಮರಳುವ ದಿನಾಂಕ ಮತ್ತೆ ಮುಂದೂಡಿಕೆಯಾಗಬಹುದು ಎನ್ನಲಾಗಿದೆ.

ಸ್ಟಾರ್‌ಲೈನರ್ ಗಗನನೌಕೆಯ ಸರ್ವೀಸ್ ಮಾಡ್ಯುಲ್‌ನಲ್ಲಿ ಹೀಲಿಯಂ ಸೋರಿಕೆಯ ಸಮಸ್ಯೆ ಆಗುತ್ತಿದೆ. ಬಾಹ್ಯಾಕಾಶ ನೌಕೆ ಕಾರ್ಯಾಚರಣೆಗಳಿಗೆ ಇದು ಪ್ರಮುಖ ವಿಚಾರವಾಗಿದೆ. ಈ ಕಾರಣಕ್ಕಾಗಿ ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ವಿಲ್ಮೋರ್ ಹೆಚ್ಚಿನ ಕಾಲ ಐಎಸ್‌ಎಸ್‌ನಲ್ಲಿ ಉಳಿಯುವಂತಾಗಿದೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದೆ ಇರುವ ಕಾರಣ ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳನ್ನು ಹೋಲುವ ಸ್ನಾಯುವಿನ ದ್ರವ್ಯರಾಶಿ ಮತ್ತು ಮೂಳೆ ಸಾಂದ್ರತೆ ಎರಡರಲ್ಲೂ ದುರ್ಬಲತೆಗೆ ಇದು ಕಾರಣವಾಗುತ್ತದೆ.