Ad

ಏಕಾಏಕಿ ಬ್ಯಾನ್​​ ಆಯ್ತು ವಾಟ್ಸ್​​ಆ್ಯಪ್​, ಇನ್​ಸ್ಟಾ, ಯೂಟ್ಯೂಬ್​!

Ban

ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಂ, ಯೂಟ್ಯೂಬ್​ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಪ್ಲಾಟ್​​ಫಾರ್ಮ್​. ಇದೇ ಪ್ಲಾಟ್​​ಫಾರ್ಮ್ ಇದೀಗ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ.

ಹೌದು. . . ಕೋಟ್ಯಾಂತರ ಜನರು ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಂ, ಯೂಟ್ಯೂಬ್ ಇವುಗಳನ್ನು ಬಳಕೆ ಮಾಡುತ್ತಿದ್ದಾರೆ, ಮಾತ್ರವಲ್ಲದೆ ಇದರ ಮೂಲಕ ಸಮಯ ಕಳೆಯುವವರೂ ಇದ್ದಾರೆ. ಇನ್ನು ಹಲವರಿಗೆ ಈ ಪ್ಲಾಟ್​​ಫಾರ್ಮ್​ಗಳು ಆದಾಯದ ಮೂಲವಾಗಿದೆ. ಆದರೀಗ ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಟಿಕ್​ಟಾಕ್​ ಬ್ಯಾನ್​​ ಆಗಿದೆ. ಹೌದು. ನೆರೆಯ ದೇಶ ಬಾಂಗ್ಲಾದೇಶ ಈ ಪ್ಲಾಟ್​​ಫಾರ್ಮ್​ಗಳ ಮೇಲೆ ನಿಷೇಧ ಹೇರಿದೆ.

ಆಗಸ್ಟ್​ 2ರಂದು ಮೆಟಾ ಒಡೆತನದ ವಾಟ್ಸ್​ಆ್ಯಪ್​, ಇನ್​ಸ್ಟಾ, ಗೂಗಲ್​ ಒಡೆತನದ ಯೂಟ್ಯೂಬ್​ ಮತ್ತು ಬೈಟೆಡ್ಯಾನ್ಸ್​ ಒಡೆತನದ ಟಿಕ್​ಟಾಕನ್ನು ದಿಢೀರನೆ ಬ್ಯಾನ್​ ಮಾಡಿದೆ. ಟರ್ಕಿಯಲ್ಲೂ ಇದೇ ರೀತಿಯ ಕ್ರಮವನ್ನು ಅನುಸರಿಸಿದ ಬಳಿಕ ಬಾಂಗ್ಲಾದೇಶವು ಜನಪ್ರಿಯ ಪ್ಲಾಟ್​​ಫಾರ್ಮ್​ಗಳ ನಿಷೇಧವೆಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ಜುಲೈ ತಿಂಗಳಿನಲ್ಲಿ ಮೆಟಾ ಒಡೆತನದ ಫೇಸ್​​ಬುಕ್​ ಮತ್ತು ಇನ್​​​ಸ್ಟಾಗ್ರಾಂ ಬ್ಯಾನ್​ ಮಾಡಲು ಮುಂದಾಗಿತ್ತು. ಈ ಪ್ಲಾಟ್​​ಫಾರ್ಮ್​ಗಳು ಅಶಾಂತಿಗೆ ಕಾರಣವಾಗಿದ್ದ ಕಾರಣ ಸ್ಥಗಿತಗೊಳಿಸಲಾಯಿತು.  ಟರ್ಕಿಯಲ್ಲೂ ಆಗಸ್ಟ್​ 1 ರಂದು ಇನ್​ಸ್ಟಾವನ್ನು ಬ್ಯಾನ್​ ಮಾಡಲಾಗಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ಈ ನಿರ್ಣಯ ತೆಗೆದುಕೊಂಡಿದೆ.

Ad
Ad
Nk Channel Final 21 09 2023