ನವದೆಹಲಿ: ಭಾರತ ಕೈಗೊಂಡಿದ್ದ ಚಂದ್ರಯಾನ-3 ಯೋಜನೆಯಲ್ಲಿದ್ದ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೆ„ನಲ್ಲಿ ಬರೋಬ್ಬರಿ 160 ಕಿ.ಮೀ. ವಿಸ್ತಾರವುಳ್ಳ ಕುಳಿಯನ್ನು ಪತ್ತೆ ಮಾಡಿದೆ. ಇದು ಚಂದ್ರನ ಭೌಗೋಳಿಕ ಅಧ್ಯಯದಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಇಸ್ರೋ ಹೇಳಿದೆ. ಅದರ ವ್ಯಾಪ್ತಿ ಬೆಂಗಳೂರಿನಿಂದ ಹಾಸನದಷ್ಟು ದೂರದ ವ್ಯಾಪ್ತಿ ಇದೆ.
ಚಂದ್ರನ ದಕ್ಷಿಣ ಧ್ರುವದಿಂದ ಈ ಕುಳಿ ಪ್ರದೇಶ 350 ಕಿ.ಮೀ. ದೂರದಲ್ಲಿದ್ದು, ಚಂದ್ರನ ಅಧ್ಯಯನಕ್ಕೆ ಇದು ಪ್ರಶಸ್ತ ಸ್ಥಳ ಎಂದು ಇಸ್ರೋ ಹೇಳಿದೆ. ಯಾವುದೇ ಬೃಹತ್ ಗಾತ್ರದ ವಸ್ತು ಚಂದ್ರನಿಗೆ ಅಪ್ಪಳಿಸುವ ಮೂಲಕ ಅಥವಾ ಚಂದ್ರನ ಮೇಲೆ ಉಂಟಾದ ಸ್ಫೋಟದಿಂದಾಗಿ ಈ ಕುಳಿ ಉಂಟಾಗಿರುವ ಸಾಧ್ಯತೆ ಇದೆ. ಇದು ಸಂಭವಿಸಿದ ವೇಳೆ ಚಂದ್ರ ಆಳದಲ್ಲಿದ್ದ ವಸ್ತುಗಳು ಹೊರ ಚಿಮ್ಮಿರುವ ಸಾಧ್ಯತೆ ಇದೆ. ಹೀಗಾಗಿ ಚಂದ್ರನ ಭೌಗೋಳಿಕ ಸಂರಚನೆಯ ಅಧ್ಯಯನಕ್ಕೆ ಇದು ನೆರವಾಗಲಿದೆ ಎನ್ನಲಾಗಿದೆ.
Ad