Ad

ಫೋಲ್ಡೇಬಲ್​ ಸ್ಮಾರ್ಟ್​​ಫೋನನ್ನು ಪರಿಚಯಿಸುತ್ತಿದೆ ಗೂಗಲ್​

Fold

ಜಾಗತಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಗೂಗಲ್​ ತನ್ನದೇ ಆದ ಜನಪ್ರಿಯತೆ ಪಡೆದಿದೆ. ಇದೀಗ ಗ್ರಾಹಕರಿಗಾಗಿ ಪಿಕ್ಸೆಲ್​ ವತಿಯಿಂದ ನಾಲ್ಕು ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನಗಳನ್ನು ಆಗಸ್ಟ್​ 14ರಂದು ರಿಲೀಸ್​​ ಮಾಡಲಿದೆ.

ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್​​ ಸ್ಮಾರ್ಟ್​ಫೋನನ್ನು ಪರಿಚಯಿಸುತ್ತಿದೆ. ಇದು ಮಡಚಬಹುದಾದ ಫೋನ್​ ಆಗಿದೆ. ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್ ಕುರಿತಾಗಿ ಸ್ಪಷ್ಟವಾದ ಮಾಹಿತಿಯನ್ನು ಕಂಪನಿ ಹಂಚಿಕೊಂಡಿಲ್ಲ. ಆದರೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನೂತನ ಫೋನ್​ ಟೆನ್ಸರ್​ ಜಿ4 ಚಿಪ್​​ಸೆಟ್​ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತಿದೆ.

ಗೂಗಲ್​ ಪಿಕ್ಸೆಲ್​​​ 9 ಪ್ರೊ ಫೋಲ್ಡ್ ದೊಡ್ಡದಾದ ಡಿಸ್​​ಪ್ಲೇಯೊಂದಿಗೆ ಬರಲಿದೆ. ಮಡಚಬಹುದಾದ ವಿನ್ಯಾಸವನ್ನು ಹೊಂದಿದೆ. 256ಜಿಬಿ ಮತ್ತು 512ಜಿಬಿ ಸಂಗ್ರಹಣ ಸಾಮರ್ಥ್ಯದೊಂದಿಗೆ ಪರಿಚಯಿಸಲಾಗುತ್ತದೆ ಎನ್ನಲಾಗುತ್ತಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 2152 x 2076 ಪಿಕ್ಸೆಲ್​​ ರೆಸಲ್ಯೂಶನ್​. 120HZ ರಿಫ್ರೆಶ್​​ ದರದೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಇನ್ನು ಸ್ಮಾರ್ಟ್​ಫೋನಿನ ಬೆಲೆಯ ಬಗ್ಗೆ ಬಿಡುಗಡೆಗೊಂಡ ಬಳಿಕವಷ್ಟೇ ತಿಳಿದುಬರಬೇಕಿದೆ.

 

Ad
Ad
Nk Channel Final 21 09 2023