Bengaluru 22°C
Ad

ಇನ್ನು ಸಿಮ್ ಬದಲಾಯಿಸಲು, ನಂಬರ್ ಪೋರ್ಟ್‌ನಲ್ಲಿ ನಾಳೆಯಿಂದ ಹೊಸ ನಿಯಮ

ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ.

ನವದೆಹಲಿ : ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇತ್ತೀಚೆಗೆ ಕೆಲ ನಿಯಮಗಳನ್ನು ಪರಿಷ್ಕರಿಸಿದೆ.

Ad
300x250 2

ಈ ಪ್ರಕಾರ ಜುಲೈ 1ರ ಬಳಿಕ ವಂಚಕರು ಸಿಮ್ ಕಾರ್ಡ್ ಬದಲಾಯಿಸುವ ಕೆಲಸವಾಗಲೀ, ಮೊಬೈಲ್ ನಂಬರ್ ಪೋರ್ಟ್ ಮಾಡುವ ಕೆಲಸವಾಗಲೀ ಕಷ್ಟವಾಗಲಿದೆ.

ಮೊದಲುಯ ಸಿಮ್‌ ಕಳಡದುಹೋದಲಲಿ ಸಿಮ್‌ನ್ನು ಬ್ಲಾಕ್‌ ಮಾಡಿ ಹೊಸ ಸಿಮ್ ಖರೀದಿಸಿದ ಬಳಿಕ ಹಳೆಯ ಸಿಮ್ ಮರಳಿಸಿ ಹೊಸದಕ್ಕೆ ನಂಬರ್ ಆ್ಯಕ್ಟಿವೇಟ್ ಮಾಡಿಸಬಹುದು. ಈಗ ಈ ನಿಯಮದಲ್ಲಿ ಟ್ರಾಯ್ ಬದಲಾವಣೆ ಮಾಡಿದೆ. ಹೊಸ ಸಿಮ್ ಪಡೆದು ಅದಕ್ಕೆ ಹಿಂದಿನ ಸಿಮ್ ನಂಬರ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನವಾದರೂ ಕಾಯಬೇಕಾಗುತ್ತದೆ.

ಹಾಗೆಯೇ, ಸಿಮ್ ಬದಲಾಯಿಸುವಾಗ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಯೂನಿಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಕೋಡ್ ಅನ್ನು ನೀಡುತ್ತವೆ. ಇದು ಮೊಬೈಲ್ ನಂಬರ್ ಅನ್ನು ಬೇರೆ ಸಿಮ್​ಗೆ ವರ್ಗಾಯಿಸುವ ಕಾರ್ಯದ ಮೊದಲ ಹಂತವಾಗಿರುತ್ತದೆ. ಈ ಎಂಟು ಅಂಕಿಗಳ ಕೋಡ್ ಅನ್ನು ಹಾಕಿದ ಬಳಿಕ ಮೊಬೈಲ್ ನಂಬರ್ ಅನ್ನು ಬೇರೆ ಸಿಮ್​ಗೆ ಪೋರ್ಟ್ ಮಾಡಬಹುದು. ಇಲ್ಲಿ ಹೊಸ ನಿಯಮದ ಪ್ರಕಾರ ಸಿಮ್ ನಿಷ್ಕ್ರಿಯಗೊಂಡು ಏಳು ದಿನಗಳವರೆಗೆ ಟೆಲಿಕಾಂ ಆಪರೇಟರ್​ಗಳು ಯುಪಿಸಿ ಕೋಡ್ ಅನ್ನು ಒದಗಿಸುವಂತಿಲ್ಲ ಎನ್ನುವ ನಿಯಮವನ್ನು ಟ್ರಾಯ್ ಸೇರಿಸಿದೆ.

ಟ್ರಾಯ್​ನಿಂದ ಯಾಕೆ ಈ ಕ್ರಮ?
ದೇಶಾದ್ಯಂತ ಸಿಮ್ ಸ್ವ್ಯಾಪಿಂಗ್ ಹಗರಣಗಳು, ಮೊಬೈಲ್ ನಂಬರ್ ದುರುಪಯೋಗಡಿಸಿಕೊಳ್ಳುವುದು ಇತ್ಯಾದಿ ವಂಚನೆಗಳು ನಡೆಯುತ್ತಿರುವುದು ಹೆಚ್ಚಿದೆ. ಇದನ್ನು ತಡೆಯಲು ಟ್ರಾಯ್ ಈ ನಿಯಮ ರೂಪಿಸಿರಬಹುದು ಎನ್ನಲಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧಿಕೃತವಾಗಿ ಕಾರಣ ನೀಡಿಲ್ಲ. ದೂರಸಂಪರ್ಕ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ಅದು ಹೇಳಿದೆ.

 

Ad
Ad
Nk Channel Final 21 09 2023
Ad