Ad

ಇಂದು ಬಾಹ್ಯಾಕಾಶದಿಂದ ನೇರ ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುನೀತಾ ವಿಲಿಯಮ್ಸ್

Nasa

ವಾಷಿಂಗ್ಟನ್‌:  ಬಾಹ್ಯಾಕಾಶದಲ್ಲಿ ಬಂಧಿಯಾಗಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಇಂದು ರಾತ್ರಿ 11 ಗಂಟೆಗೆ ನೇರ ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ad
300x250 2

ಬಾಹ್ಯಾಕಾಶದಲ್ಲಿ 10 ದಿನಗಳನ್ನು ಕಳೆಯಲು ಹೋಗಿದ್ದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌‍ ಹಾಗೂ ಆಕೆಯ ಸಹುದ್ಯೋಗಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲೇ ತಾಂತ್ರಿಕ ದೋಷದಿಂದ ಬಂಧಿಯಾಗಿದ್ದಾರೆ.

ಸದ್ಯ ಅವರು ಸುರಕ್ಷಿತ ವಾಗಿದ್ದಾರೆ ಎಂದು ನಾಸಾ ಘೋಷಿಸಿದೆ. ಅಲ್ಲದೆ, ನಾಳೆ ರಾತ್ರಿ 8.30ಕ್ಕೆ (ಜು.10ರಂದು 11 ಗಂಟೆ ಅಮೇರಿಕಾ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ನೇರಪ್ರಸಾರದಲ್ಲಿ ಹಾಜರಾಗಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ. NASA+, NASA ಟೆಲಿವಿಷನ್, NASA ಅಪ್ಲಿಕೇಶನ್, YouTube, ಮತ್ತು NASA ವೆಬ್‌ಸೈಟ್ ಸೇರಿದಂತೆ ಹಲವಾರು ವೇದಿಕೆಗಳಲ್ಲಿ NASA ಲೈವ್ ಈವೆಂಟ್ ಅನ್ನು ಸ್ಟ್ರೀಮ್ ಮಾಡುತ್ತದೆ.

ಸುನೀತಾ ಹಾಗೂ ಇತರರು ಬಾಹ್ಯಾಕಾಶದಲ್ಲಿ ಸುರಕ್ಷಿತ ವಾಗಿರುವ ಫೋಟೋಗಳನ್ನು ನಾಸಾ ತನ್ನ ಎಕ್‌್ಸ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗೂ ಸದ್ಯ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳಿಗೆ ಏನೂ ತೊಂದರೆಯಿಲ್ಲ. ಶೀಘ್ರವೇ ಅವರನ್ನು ವಾಪಸ್‌‍ ಕರೆ ತರುವ ಪ್ರಯತ್ನ ಮುಂದುವರೆದಿದೆ ಎಂದು ನಾಸಾ ಬರೆದುಕೊಂಡಿದೆ.

https://x.com/Commercial_Crew/status/1808200133886005320

Ad
Ad
Nk Channel Final 21 09 2023
Ad