ಎಸ್ ಡಬ್ಲ್ಯೂ MG ಮೋಟಾರ್ ಇಂಡಿಯಾ ತನ್ನ ಹೊಸ MG ವಿಂಡ್ಸರ್ EV ಅನ್ನು ಕೆಲವು ಸಮಯದ ಹಿಂದೆ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಪರಿಚಯಾತ್ಮಕ ಬೆಲೆಯನ್ನು ಬಹಿರಂಗಪಡಿಸಿತ್ತು. ಇದೀಗ ತನ್ನ ವೇರಿಯಂಟ್ಗಳ ಬೆಲೆಗಳನ್ನು ಘೋಷಿಸಿದೆ. ಇದರ ಪ್ರಕಾರ, MG ವಿಂಡ್ಸರ್ EV ಬೆಲೆ 13.50 ಲಕ್ಷ ರೂ (ಎಕ್ಸ್ ಶೋ ರೂಂ)ಯಿಂದ ಆರಂಭಗೊಳ್ಳುತ್ತದೆ.
ಈ ಕಾರಿನ ಬುಕಿಂಗ್ ಅಕ್ಟೋಬರ್ 3ರಿಂದ ಪ್ರಾರಂಭವಾಗಲಿದೆ. ಎಂಜಿ ವಿಂಡ್ಸರ್ ಇವಿ ಮೂರು ರೂಪಾಂತರಗಳಲ್ಲಿ ಲಭ್ಯ. ಇದರಲ್ಲಿ ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಸೇರಿವೆ. ಇವುಗಳ ಬೆಲೆಗಳನ್ನು ಕ್ರಮವಾಗಿ 13.50 ಲಕ್ಷ, 14.50 ಲಕ್ಷ ಮತ್ತು 15.50 ಲಕ್ಷ ರೂ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ) ಎಂದು ನಿಗದಿಪಡಿಸಿದೆ.
ಗ್ರಾಹಕರು ನಾಲ್ಕು ಬಣ್ಣಗಳಲ್ಲಿ ಕಾರುಗಳನ್ನು ಆಯ್ಕೆ ಮಾಡಬಹುದು. ಇದರಲ್ಲಿ ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್ ಸೇರಿವೆ. ವಿಂಡ್ಸರ್ EV ಮೂರು ವರ್ಷಗಳು ಅಥವಾ 45,000 ಕಿ.ಮೀ ನಂತರ ಶೇ 60ರಷ್ಟು ಮರುಖರೀದಿ ಮೌಲ್ಯ ನಿಗದಿಪಡಿಸಲಾಗಿದೆ. MG ಅಪ್ಲಿಕೇಶನ್‌ನಿಂದ eHub ಬಳಸಿಕೊಂಡು ಸಾರ್ವಜನಿಕ ಚಾರ್ಜರ್‌ಗಳಲ್ಲಿ ಮೊದಲ ವರ್ಷ ಉಚಿತ ಚಾರ್ಜಿಂಗ್ ವ್ಯವಸ್ಥೆ ಮತ್ತು ಮೊದಲ ಮಾಲೀಕರಿಗೆ ಜೀವಿತಾವಧಿಯ ಬ್ಯಾಟರಿ ವ್ಯಾರೆಂಟಿ ನೀಡುತ್ತಿದೆ.
MG ವಿಂಡ್ಸರ್ EV ಅನ್ನು ಪವರ್ ಮಾಡಲು, 38kWh ಬ್ಯಾಟರಿ ಪ್ಯಾಕ್ ಅನ್ನು ಒಂದೇ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇದು 134bhp ಪವರ್ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ ARAI ಪ್ರಮಾಣೀಕರಿಸಿದ 332 ಕಿ.ಮೀ ಚಲಿಸುತ್ತದೆ.