ಮುMಬೈ: ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ನಾನಾ ಕಂಪನಿಗಳು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಂತೆಯೇ ಇದೀಗ ಜನಪ್ರಿಯ ಮಾರುತಿ ಸುಜುಕಿ ಕಂಪನಿಯು ಮುಂದಿನ ವರ್ಷ ಹೊಸ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಕುರಿತಾಗಿ ಕಂಪನಿ ವರದಿ ಮಾಡಿದೆ.
ಮಾರುತಿ ಸುಜುಕಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಹಿಸಾಶಿ ಟಕೆಯುಚಿ ಈ ಕುರಿತಾಗಿ ಮಾತನಾಡಿದ್ದು, ‘ಕಂಪನಿಯು ಪರಿಚಯಿಸುತ್ತಿರುವ ಎಲೆಕ್ಟ್ರಿಕ್ ವಾಹನವು 500 ಕಿಲೋ ಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 60 ಕಿಲೋವ್ಯಾಟ್ ಗಂಟೆಗಳ ಬ್ಯಾಟರಿಯಿಂದ ಚಾಲಿತವಾಗುವ ಸಾಮರ್ಥ್ಯ ಇದಕ್ಕಿದೆ’ ಎಂದು ಹೇಳಿದ್ದಾರೆ. ಮಾರುತಿ ಸುಜುಕಿಯು ಮುಂದಿನ ವರ್ಷ ಮಧ್ಯಮ ಗಾತ್ರದ ಎಸ್ಯುವಿ ಮತ್ತು ಇವಿಎಕ್ಸ್ ಎಲೆಕ್ಟ್ರಿಕ್ ವಾಹನ ಪರಿಚಯಿಸುವ ನಿರೀಕ್ಷೆ ಇದೆ. ಸದ್ಯ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಬೆಲೆ 15 ಲಕ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.