Bengaluru 22°C
Ad

ಕೆಎಸ್​ಆರ್​ಟಿಸಿ ಇನ್ಮುಂದೆ ಕ್ಯಾಶ್​ಲೆಸ್: ಆನ್​ಲೈನ್ ಪಾವತಿಗೆ ರೆಡಿಯಾಗಿ

Ksrtc

ಬೆಂಗಳೂರು: ಟಿಕೆಟ್ ಕೊಡುವ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಕಂಡಕ್ಟರ್​​ಗಳ ಮಧ್ಯೆ ಚಿಲ್ಲರೆಗಾಗಿ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ. ಈ ರೀತಿಯ ಕಿರಿಕಿರಿಗಳಿಗೆ ಮುಕ್ತಿಹಾಡಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.

Ad
300x250 2

ಖಾಸಗಿ ಕಂಪೆನಿಯಿಂದ ಒಂದು ಮಷಿನ್​​ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದಲ್ಲಿ 10245 ಸಾವಿರ ಇಟಿಎಂ ಟಿಕೆಟ್ ಮಷಿನ್​​ಗಳ ಖರೀದಿಗೆ ಕೆಎಸ್​ಆರ್​ಟಿಸಿ ಮುಂದಾಗಿದೆ. ಇದರಿಂದ ಇನ್ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಗೂಗಲ್ ಪೇ, ಫೋನ್ ಪೇ. ಪೇಟಿಎಂ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ಈ ನೂತನ ಮಷಿನ್​​ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್​​​ಗಳನ್ನು ಬಳಸಿಯೂ ಹಣ ಪಾವತಿ ಮಾಡಬಹುದು.

ನಿಗಮದ 6500 ಬಸ್ಸುಗಳಲ್ಲೂ ಹೊಸ ವ್ಯವಸ್ಥೆ ಪರಿಚಯ ಮಾಡಲಾಗುತ್ತದೆ. ಶಕ್ತಿ ಯೋಜನೆಯ ಪಿಂಕ್‌ ಟಿಕೆಟ್​​​ಗಳನ್ನು ಈ ಇಟಿಎಂ ಮಷಿನ್ ಗಳಲ್ಲಿ ಸ್ಕ್ಯಾನ್ ಮಾಡಿ ಅವಕಾಶ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ

Ad
Ad
Nk Channel Final 21 09 2023
Ad