ನವದೆಹಲಿ: ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಬಹಳ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಜಿಯೋ ಏರ್ಫೈಬರ್ ಸರ್ವಿಸ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದೆ.
ಇವತ್ತಿನಿಂದ ಈ ಆಫರ್ ಚಾಲನೆಗೆ ಬಂದಿದ್ದು, ನವೆಂಬರ್ 3ರವರೆಗೂ ಲಭ್ಯ ಇರುತ್ತದೆ. ಹೊಸ ಗ್ರಾಹಕರನ್ನು ಸೆಳೆಯಲು ಜಿಯೋ ಈ ತಂತ್ರ ಮಾಡಿದೆ. ಹಾಗೆಯೇ, ಹಾಲಿ ಜಿಯೋ ಫೈಬರ್ ಮತ್ತು ಜಿಯೊ ಏರ್ಫೈಬರ್ ಗ್ರಾಹಕರೂ ಕೂಡ ಒಂದು ವರ್ಷ ಉಚಿತ ಸೇವೆಯ ಅವಕಾಶ ಪಡೆಯಬಹುದು.
ಯಾವುದೇ ರಿಲಾಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್ನಲ್ಲಿ ನೀವು ಕನಿಷ್ಠ 20,000 ರೂ ಮೌಲ್ಯದ ವಸ್ತುಗಳನ್ನು ಖರೀದಿಸುವುದು ಒಂದು ಮಾರ್ಗ. ಟಿವಿ, ಮೊಬೈಲ್, ಲ್ಯಾಪ್ಟಾಪ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಇತ್ಯಾದಿ ನಾನಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ರಿಲಾಯನ್ಸ್ ಡಿಜಿಟಲ್ನಲ್ಲಿ ಲಭ್ಯ ಇವೆ. ಇಲ್ಲಿ ನೀವು 20,000 ರೂಗೂ ಹೆಚ್ಚು ಶಾಪಿಂಗ್ ಮಾಡಿದರೆ ಒಂದು ವರ್ಷ ನಿಮಗೆ ಜಿಯೋ ಏರ್ಫೈಬರ್ ಸರ್ವಿಸ್ ಉಚಿತವಾಗಿ ಸಿಗುತ್ತದೆ.
ಜಿಯೋ ಫೈಬರ್ ಬಳಕೆದಾರರು ಈಗಿರುವ ತಮ್ಮ ಪ್ಲಾನ್ಗೆ ಒನ್ ಟೈಮ್ ಅಡ್ವಾನ್ಸ್ ರೀಚಾರ್ಜ್ ಮಾಡಿದರೆ ಒಂದು ವರ್ಷ ಫ್ರೀ ಸರ್ವಿಸ್ ಪಡೆಯಬಹುದು.
ಇನ್ನು, ಈಗಾಗಲೇ ಜಿಯೋ ಏರ್ಫೈಬರ್ ಕನೆಕ್ಷನ್ ಹೊಂದಿರುವವರೂ ಕೂಡ ಒಂದು ವರ್ಷದ ಉಚಿತ ಸರ್ವಿಸ್ ಅನ್ನು ಪಡೆಯಲು ಅವಕಾಶ ಇದೆ. 2,222 ರೂ ಮೌಲ್ಯದ 3 ತಿಂಗಳ ದೀಪಾವಳಿ ಪ್ಲಾನ್ ಅನ್ನು ಖರೀದಿಸಿದಲ್ಲಿ ಒಂದು ವರ್ಷ ಪ್ರೀ ಸರ್ವಿಸ್ ಸಿಗುತ್ತದೆ.