Ad

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ನ್ಯೂ ಮಾಡೆಲ್; ಹೇಗಿದೆ ನೋಡಿ

New Java 42 Fj350

ಜಾವಾ 42 ತನ್ನ ಹೊಸ ರೂಪಾಂತರವನ್ನು ಹೊರ ತಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಬೈಕ್‌ನ ಟೀಸರ್ ಅನ್ನು ಬ್ರ್ಯಾಂಡ್‌ನಿಂದ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬೈಕ್‌ನ ಕೆಲವು ಭಾಗಗಳು ಗೋಚರಿಸಿದ್ದವು. ಇದರೊಂದಿಗೆ ಬೈಕ್‌ನ ಕೆಲವು ವೈಶಿಷ್ಟ್ಯಗಳನ್ನು ನೋಡಬಹುದಾಗಿತ್ತು.

ಜಾವಾದಲ್ಲಿ ಮೋಟಾರ್‌ಸೈಕಲ್ ಉಕ್ಕಿನ ಚಾಸಿಸ್‌ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳಿಂದ ಹೊಂದಿಸಲಾಗಿದೆ. ಆಫ್‌ಸೆಟ್ ಸ್ಪೀಡೋಮೀಟರ್, ಉತ್ತಮ ನಿರ್ವಹಣೆಗಾಗಿ ಡಬಲ್ ಗ್ರಿಲ್ ಫ್ರೇಮ್, ಫ್ಲಾಟ್ ಟಾರ್ಕ್‌ಗಾಗಿ ಆಲ್ಫಾ 2 ಪವರ್ ಚೈನ್ ಅನ್ನು ಅಳವಡಿಸಲಾಗಿದೆ. ಬೈಕ್‌ನಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್‌ಗಳು, ಕಾಂಟಿನೆಂಟಲ್ ಎಬಿಎಸ್ ಸಿಸ್ಟಮ್ ಮತ್ತು ಹೈಸ್ಪೀಡ್ ವಾಹನದ ಸುರಕ್ಷತೆಗಾಗಿ ಬ್ರಾಂಬೋ ಬ್ರೇಕ್‌ಗಳಿವೆ.

ಇನ್ನು Jawa 42 FJ350 334cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 21.45bhp ಮತ್ತು 29.62Nm ನ ಗರಿಷ್ಠ ಟಾರ್ಕ್​ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. 2 bhp ಮತ್ತು 26.84 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಜಾವಾ 42 ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಬೈಕಿನ ಎಕ್ಸ್ ಶೋ ರೂಂ ಬೆಲೆ ಸುಮಾರು 1.99 ರಿಂದ ಆರಂಭಗೊಳ್ಳಲಿದೆ. ಹೊಸ ಜಾವಾ 42 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ವಿರುದ್ಧ ತನ್ನ ಪೈಪೋಟಿ ಹೆಚ್ಚಿಸಲು ಬಿಡುಗಡೆಗೊಳಿಸಲಾಗಿದೆ.

ಇತರೆ ಬಣ್ಣಗಳಲ್ಲಿ ಜಾವಾ 42 FJ350 ಬೆಲೆ ನೋಡುವುದಾದರೇ, ಅರೋರ್ ಗ್ರೀನ್ ಮ್ಯಾಟ್ ಬೆಲೆ 2,10,142 ರೂ., ಕಾಸ್ಮೊ ಬ್ಲೂ ಮ್ಯಾಟ್ 2,15,142 ರೂ., ಮಿಸ್ಟಿಕ್ ಕಾಪರ್​ 2,15,142 ರೂ., ಡೀಪ್ ಬ್ಲ್ಯಾಕ್- ರೆಡ್ ಕ್ಲಾಡ್ 2,20,142 ರೂ., ಡೀಪ್ ಬ್ಲ್ಯಾಕ್- ಬ್ಲ್ಯಾಕ್ ಕ್ಲಾಡ್ 2,20, 142 ರೂ. ಇದೆ.

Ad
Ad
Nk Channel Final 21 09 2023