Bengaluru 25°C
Ad

ಬಹುನಿರೀಕ್ಷಿತ iPhone 15, 14, 13ಗೆ ಭರ್ಜರಿ ಡಿಸ್ಕೌಂಟ್‌

Iphone (1)

ಬಹುನಿರೀಕ್ಷಿತ iPhone 16 ಸೀರೀಸ್ ಜಗತ್ತಿನಾದ್ಯಂತ ಲಾಂಚ್‌ ಆಗಿದೆ. ಕಳೆದ ದಿನ ರಾತ್ರಿಯಿಂದ iPhone 16 ಬಗ್ಗೆಯೇ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಹೊಸ ರೂಪ, ಹೊಸ ಬಣ್ಣ ಹಾಗೂ ಹಲವು ಬದಲಾವಣೆಯ ಜೊತೆ ಮಾರುಕಟ್ಟೆಗೆ ಬಂದಿರುವ iPhone 16 ಸೀರೀಸ್ ಗ್ರಾಹಕರನ್ನು ಸೆಳೆಯುತ್ತಿದೆ.

iPhone 16 ಲಾಂಚ್ ಆಗುತ್ತಿದ್ದಂತೆ ಅದರ ರೇಟ್‌ ಎಷ್ಟು ಅನ್ನೋ ಕುತೂಹಲ ಮನೆ ಮಾಡಿತ್ತು. ಆ್ಯಪಲ್ ಕಂಪನಿ ಹೊಸ ಸೀರೀಸ್‌ ಲಾಂಚ್ ಆದ ಕೆಲವೇ ಕ್ಷಣಗಳಲ್ಲಿ ಅದನ್ನೂ ಅನೌನ್ಸ್ ಮಾಡಿದೆ. ಸದ್ಯ ಭಾರತದಲ್ಲಿ ಐಫೋನ್​ 16ನ ದರ 128ಜಿಬಿ ಮಾಡಲ್​ 79,900 ರೂಪಾಯಿಂದ ಶುರುವಾಗುತ್ತದೆ. ಇದೆ ಹ್ಯಾಂಡ್​ಸೆಟ್​ 256 ಜಿಬಿ ಹಾಗೂ 512ಜಿಬಿ ಮಾಡಲ್​ನಲ್ಲೂ ಕೂಡ ದೊರೆಯುತ್ತವೆ ಅವುಗಳ ಬೆಲೆ 89,900 ಹಾಗೂ 1,09,900 ​ರೂಪಾಯಿ.

iPhone 15 – ಹೊಸ ದರ – 69,900 ಹಳೇ ದರ – 79,900
iPhone 15 Plus – ಹೊಸ ದರ – 79,900 ಹಳೇ ದರ – 89,900
iPhone 14 – ಹೊಸ ದರ – 59,900 ಹಳೇ ದರ – 69,900
iPhone 14 Plus – ಹೊಸ ದರ – 69,900 ಹಳೇ ದರ – 79,900

iPhone ಸೀರೀಸ್‌ನ ಈ ಬದಲಾವಣೆಯ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಆ್ಯಪಲ್ ಸ್ಟೋರ್‌ ಹಾಗೂ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಹೊಸ ಹಾಗೂ ಹಳೇ ಫೋನ್‌ಗಳನ್ನ ಬುಕ್ ಮಾಡಿಕೊಳ್ಳಬಹುದಾಗಿದೆ.

Ad
Ad
Nk Channel Final 21 09 2023