Ad

ಭಾರತದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು : ಗೂಗಲ್

ಭಾರತದಲ್ಲಿ ತಯಾರಿಸಲಾಗುವ ಪಿಕ್ಸೆಲ್ ಶ್ರೇಣಿಯ ಗೂಗಲ್ ಸ್ಮಾರ್ಟ್​ಫೋನ್​ಗಳನ್ನು ಮುಂದುವರಿದ ದೇಶಗಳಿಗೆ ರಫ್ತು ಮಾಡಲು ಗೂಗಲ್ ಸಂಸ್ಥೆ ಯೋಜಿಸಿದೆ.

ನವದೆಹಲಿ : ಭಾರತದಲ್ಲಿ ತಯಾರಿಸಲಾಗುವ ಪಿಕ್ಸೆಲ್ ಶ್ರೇಣಿಯ ಗೂಗಲ್ ಸ್ಮಾರ್ಟ್​ಫೋನ್​ಗಳನ್ನು ಮುಂದುವರಿದ ದೇಶಗಳಿಗೆ ರಫ್ತು ಮಾಡಲು ಗೂಗಲ್ ಸಂಸ್ಥೆ ಯೋಜಿಸಿದೆ. ಆ್ಯಪಲ್​ನ ಐಫೋನ್​ನಂತೆ ಗೂಗಲ್ ಪಿಕ್ಸಲ್ ಸ್ಮಾಟ್​ಫೋನ್​ಗಳೂ ಸದ್ಯದಲ್ಲೇ ಭಾರತದಲ್ಲಿ ತಯಾರಾಗಲಿವೆ. ಐಫೋನ್ ತಯಾರಿಸುವ ಫಾಕ್ಸ್​ಕಾನ್ ಸಂಸ್ಥೆಯೇ ಗೂಗಲ್ ಪಿಕ್ಸೆಲ್ ಅನ್ನೂ ತಯಾರಿಸಿಕೊಡಲಿದೆ. ಡಿಕ್ಸಾನ್ ಟೆಕ್ನಾಲಜೀಸ್​ನ ಉಪಸಂಸ್ಥೆಯಾದ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್ ಕೂಡ ಪಿಕ್ಸೆಲ್ ಉತ್ಪಾದನೆ ಮಾಡಲಿದೆ.

Ad
300x250 2

ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ತೈವಾನ್ ಮೂಲದ ಫಾಕ್ಸ್​ಕಾನ್ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ಪಿಕ್ಸೆಲ್ ಫೋನ್​ಗಳ ಪ್ರಾಯೋಗಿಕ ಉತ್ಪಾದನೆ ಆರಂಭಿಸಿದೆ.

ತೈವಾನ್​ನ ಮತ್ತೊಂದು ಎಲೆಕ್ಟ್ರಾನಿಕ್ಸ್ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಲ್ಯಾಪ್​ಟಾಪ್ ತಯಾರಕರಾದ ಕಾಮ್​ಪಾಲ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಡಿಕ್ಸಾನ್ ಒಪ್ಪಂದ ಮಾಡಿಕೊಂಡಿದ್ದು ಎರಡೂ ಜಂಟಿಯಾಗಿ ಸೇರಿ ಭಾರತದಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್​ಫೋನ್ ತಯಾರಿಸಲಿವೆ. ಈ ವರ್ಷಾಂತ್ಯದೊಳಗೆ ಉತ್ಪಾದನೆ ಶುರುವಾಗುವ ನಿರೀಕ್ಷೆ ಇದೆ.

Ad
Ad
Nk Channel Final 21 09 2023
Ad