ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ, ಹಾಗಿದ್ರೆ ಇದು ಒಳ್ಳೆಯ ಸುದ್ದಿ. ಕಣ್ಣು ಕುಕ್ಕುವ ಡೀಲ್ ಕೂಡ ಲಭ್ಯವಿದೆ. ನೀವು ಊಹಿಸದ ಆಫರ್ ಕೂಡ ಸದ್ಯ ಲಭ್ಯವಿದೆ. ಇದೀಗ 80,000 ರೂಪಾಯಿ ಬಜೆಟ್ ಇರುವ ಸ್ಮಾರ್ಟ್ ಫೋನ್ ಒಂದು ಕೇವಲ 10,000 ರೂಪಾಯಿಗೆ ನಿಮ್ಮ ಕೈ ಸೇರುತ್ತದೆ.
ಹೇಗೆ ಎಂದು ಯೋಚಿಸ್ತಾ ಇದ್ದೀರಾ? ಹಾಗಿದ್ರೆ ಈ ವಿಷಯ ತಿಳಿದಿರಲೇಬೇಕು. ಪ್ರಸಿದ್ದ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್ ಅದ್ಭುತವಾದ ಡೀಲ್ ಅನ್ನು ನೀಡುತ್ತಿದೆ. ಬಿಗ್ ಬಿಲಿಯನ್ ಡೇಸ್ ಮಾರಾಟದ ಭಾಗವಾಗಿ ವಿವಿಧ ಸ್ಮಾರ್ಟ್‌ಫೋಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ.
ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಒಂದಾಗಿರುವ ಸ್ಯಾಮ್ಸಂಗ್ ಸಂಸ್ಥೆ ತನ್ನ Samsung Galaxy S23 FE ಫೋನ್ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಈ ಫೋನಿನ ಮೂಲ ಬೆಲೆ 79,999 ರೂಪಾಯಿ ಆಗಿದೆ. ಆದ್ರೆ ನೀವು ಯಾವುದೇ ಆಫರ್ ಇಲ್ಲದೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 29,999 ರೂ.ಗಳಿಗೆ ಖರೀದಿಸಬಹುದು.
ಅಂದರೆ ನೀವು ಈ ಫೋನ್‌ನಲ್ಲಿ ಶೇಕಡಾ 62 ರಷ್ಟು ರಿಯಾಯಿತಿ ಪಡೆಬಹುದು. ಇತರ ಆಫರ್‌ಗಳೂ ಇವೆ. ಈ ಫೋನ್ ಮೇಲೆ ನೀವು ನಿಮ್ಮ ಹಳೆ ಫೋನ್ ಜೊತೆಗೆ ರೂ. 18 ಸಾವಿರದವರೆಗೆ ವಿನಿಮಯ ರಿಯಾಯಿತಿ ಪಡೆಯಬಹುದು. ಅಂದರೆ ಆಗ ನೀವು ಈ ಫೋನ್ ಅನ್ನು ಕೇವಲ 11,900 ರೂ.ಗಳಿಗೆ ಪಡೆಯಬಹುದು.
ಆದರೆ ಇಲ್ಲಿ ನೀವು ಪಡೆಯುವ ವಿನಿಮಯ ಮೌಲ್ಯವು ನಿಮ್ಮ ಹಳೆಯ ಫೋನ್ ನ ಮೌಲ್ಯವನ್ನು ಆಧರಿಸಿ ಅದು ಬದಲಾಗುತ್ತದೆ. ಆಗ ಕೈಯಿಂದ ಹೆಚ್ಚುವರಿ ಹಣವೂ ಬೀಳಬಹುದು. ಪ್ರತಿಯೊಂದು ಫೋನ್ ತನ್ನದೇ ಆದ ವಿನಿಮಯ ರಿಯಾಯಿತಿಯನ್ನು ಹೊಂದಿರುತ್ತವೆ.
ಉದಾಹರಣೆಗೆ, ನೀವು IQOO 9 Pro ಫೋನ್ ಬಳಸುತ್ತಿದ್ದರೆ, ನೀವು ಅದನ್ನು ವಿನಿಮಯ ಮಾಡಿಕೊಂಡರೆ, ನಿಮಗೆ 12,550 ರಿಯಾಯಿತಿ ದೊರೆಯಲಿದೆ. ಆಗ ನೀವು ನಿಮ್ಮ ಕೈಯಿಂದ 16,000 ರೂ. ಗಳನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಕೊಡುಗೆಗಳು ಸಹ ಲಭ್ಯವಿದೆ. ನೀವು ಅದೇ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನೀವು ಹೆಚ್ಚುವರಿಯಾಗಿ 2 ಸಾವಿರ ರಿಯಾಯಿತಿ ಪಡೆಯಬಹುದು. ಆಗ ನೀವು ಈ ಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.
ಇನ್ನೂ ಈ ಫೋನ್‌ನ ಫೀಚರ್ಸ್ ನೋಡುವುದಾದರೆ 8 GB RAM, 128 GB ಮೆಮೊರಿ, Samsung Exynos 2200 ಪ್ರೊಸೆಸರ್, 50 MP + 12 MP ಹಿಂಬದಿಯ ಕ್ಯಾಮೆರಾ, 10 MP ಮುಂಭಾಗದ ಕ್ಯಾಮೆರಾ, 6.4 MP AMOLED ಡಿಸ್ಪ್ಲೇ, 4500 mAh ಬ್ಯಾಟರಿ, 5G ಯಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನೀವು ಈ ಫೋನ್ ಮೇಲೆ EMI ಆಯ್ಕೆಯನ್ನು ಸಹ ಪಡೆಯಬಹುದು. ಹಲವು ವಿವಿಧ ಕಂತುಗಳ EMI ಸೌಲಭ್ಯಗಳು ಲಭ್ಯವಿದೆ. ತಿಂಗಳಿಗೆ 5 ಸಾವಿರ ಹಾಗೂ 6 ತಿಂಗಳ ಅವಧಿಯ ಇಎಂಐ ಸೌಲಭ್ಯ ಸೇರಿ ಹಲವು ವಿವಿಧ ಆಯ್ಕೆಗಳು ಲಭ್ಯವಿರಲಿದೆ.