ಬಿಜೆಪಿಗೆ ವರವಾಗುವುದೇ ತ್ರಿಮೂರ್ತಿಗಳ ತಿರುಗಾಟ

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರಧಾನಿ, ಗೃಹಸಚಿವ ಸೇರಿದಂತೆ ಬಿಜೆಪಿ ರಾಷ್ಟ್ರನಾಯಕರ ರಾಜ್ಯ ಭೇಟಿ ಹೆಚ್ಚುತ್ತಿದೆ. ಆ ಮೂಲಕ ದಕ್ಷಿಣ ಭಾರದತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಬೇಕು ಎಂಬುದು ಬಿಜೆಪಿ ಉನ್ನತ ನಾಯಕರ ಚಿಂತನೆ. ಮೊನ್ನೆ ಮೊನ್ನೆಗೃಹಸಚಿವ ಅಮಿತ್‌ ಶಾ ಪುತ್ತೂರಿನಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವದ ನೆಪದಲ್ಲಿ ಮಾಡಿದ ಭಾಷಣವೂ ಕೂಡ ಪಕ್ಷ ಹಿಡಿತ, ಮತಬ್ಯಾಂಕ್‌ ಭದ್ರಪಡಿಸುವ ಸಲುವಾಗಿಯೇ ಇತ್ತು ಎಂಬುದು ಸುಳ್ಳಲ್ಲ. ಏರ್‌ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯೂ ಕೂಡ ದೇಶ, ಪಕ್ಷದ ಸಾಧನೆಗಳನ್ನು ಹೇಳಿಕೊಂಡಿದ್ದೂ ಆಯಿತು.

ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಹಲವು ಸಭೆ ಸಮಾರಂಭ ರೋಡ್‌ ಶೋ, ಕಾರ್ಯಕರ್ತರ ಸಭೆ ನಡೆಸಿದ್ದೂ ಆಗಿದೆ. ಫೆ. 27ಕ್ಕೆ ಶಿವಮೊಗ್ಗ ಏರ್‌ ಪೋರ್ಟ್‌ ಉದ್ಘಾಟನೆ ನಡೆಯಲಿದ್ದು ಮತ್ತೊಮ್ಮೆ ಪ್ರಧಾನಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ತ್ರಿಮೂರ್ತಿಗಳ ಕರ್ನಾಟಕ ಯಾತ್ರೆ ವಿಧಾನ ಸಭೆ ಚುನಾವಣೆಯನ್ನೇ ಕೇಂದ್ರೀಕರಿಸಿದೆ ಎಂಬುದು ಬಹಿರಂಗವಾಗಿದೆ.

ನೆರೆ ಬಂದಾಗ ಕಣ್ಣೆತ್ತಿಯೂ ನೋಡದವರು ಮತಕ್ಕಾಗಿ ಬಂದಿದ್ದಾರೆ: ನಡ್ಡಾ, ಶಾ, ನರೇಂದ್ರ ಮೋದಿ ತ್ರಿಮೂರ್ತಿಗಳು ಚುನಾವಣೆ ಕೇಂದ್ರೀಕರಿಸಿ ರಾಜ್ಯ ಸುತ್ತಾಟ ಆರಂಭಿಸಿರುವುದು ವಿಪಕ್ಷ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ನೆರೆ, ಪ್ರವಾಹ ಬಂದು ಜನರು ಅನ್ನ, ಸೂರಿಗಾಗಿ ಪರದಾಡುತ್ತಿದ್ದಾಗ ಇತ್ತ ಇಣುಕಿಯೂ ನೋಡದ ಪ್ರಧಾನಿ, ಗೃಹಸಚಿವರು ಈಗ ಚುನಾವಣೆಯತ್ತ ದೃಷ್ಟಿಹರಿಸಿ ಆಗಾಗ್ಗೆ ಜನರ ಕಣ್ಣೀರೊರೆಸುವ ನಾಟಕವಾಡುತ್ತಿದ್ದಾರೆ ಎಂದು ಅಣಕಿಸಿದ್ದೂ ಆಗಿದೆ.

ರಾಜ್ಯ ನಾಯಕರಿಗೆ ಶಕ್ತಿ ಇಲ್ಲವೇ: ರಾಜ್ಯದಲ್ಲಿ ಪಕ್ಷ ಸಂಘಟಿಸುವ ಶಕ್ತಿ ಬಿಜೆಪಿ ನಾಯಕರಿಲ್ಲವೇ ಎಂಬ ಪ್ರಶ್ನೆಗೆ ಹಲವು ಬಿಜೆಪಿ ವಯಸ್ಸಿನ ಮಿತಿಯ ನೆಪಹೇಳಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರನ್ನು ನೇಪಥ್ಯಕ್ಕೆ ಸರಿಸಿ ಹಲವು ಕಾಲವಾಗಿದೆ. ಪ್ರಸ್ತುತ ಅವರಿಗೆ ಸ್ವಪಕ್ಷೀಯರಿಗಿಂತ ಸಿದ್ದರಾಮಯ್ಯ, ಡಿಕೆಶಿಯಂತಹ ಪ್ರತಿಪಕ್ಷ ನಾಯಕರೇ ಆತ್ಮೀಯರಾಗಿದ್ದಾರೆ. ಮೊನ್ನೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಇದಕ್ಕೆ ಸಾಕ್ಷಿ ಒದಗಿಸುವಂತಿದೆ. ಉಳಿದಂತೆ ಕೆ.ಎಸ್‌. ಈಶ್ವರಪ್ಪ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ಬಳಿಕ ರಾಜಕೀಯ ಅಜ್ಞಾತವಾಸದಲ್ಲಿದ್ದಾರೆ. ಇನ್ನು ಸಂಸದ, ಬಿಜೆಪಿ ರಾಜ್ಯಧ್ಯಾಕ್ಷ ನಳೀನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರ ವಿರುದ್ಧ ಸ್ವಕ್ಷೇತ್ರದಲ್ಲಿಯೇ ಮಡುಗಟ್ಟಿದ ಆಕ್ರೋಶವಿದೆ. ಹೀಗಾಗಿ ರಾಜ್ಯ ಬಿಜೆಪಿ ಘಟಕ ತ್ರಿಮೂರ್ತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

Gayathri SG

Recent Posts

ಬಿಕರ್ನಕಟ್ಟೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಸ್ಥಳೀಯರು ಆಕ್ರೋಶ

ನಗರದ ಹೊರವಲಯದ ಗುರುಪುರ ಕೈಕಂಬದಲ್ಲಿ ನಿರ್ಮಾಣ ಆಗಲಿರುವ ಮೆಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು .ಕಾಮಗಾರಿ ವಿರುದ್ಧದ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ…

3 mins ago

ಕ್ರೂಸರ್ ವಾಹನ ಪಲ್ಟಿ: 3 ಮಹಿಳೆಯರು ಮೃತ್ಯು

ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಸಾಂಗೋಲಾ- ಜತ್ತ ಮಾರ್ಗದ ಬಳಿ…

4 mins ago

ಪ್ರಜ್ವಲ್ ನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ: ಪೋಸ್ಟರ್ ಅಂಟಿಸಿದ್ದ ಕಾರ್ಯಕರ್ತರು ವಶಕ್ಕೆ

ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…

17 mins ago

‘ಕಣ್ತಪ್ಪಿನಿಂದ’ ಆದ ಅಚಾತುರ್ಯ: ವಿಷಾದ ವ್ಯಕ್ತಪಡಿಸಿದ ಸುವರ್ಣ ನ್ಯೂಸ್

ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…

24 mins ago

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಗಾಡ್ ಪ್ರಾಮಿಸ್’ ಚಿತ್ರದ ಮುಹೂರ್ತ

ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…

47 mins ago

ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು

ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.

59 mins ago