ಬೆಂಗಳೂರು: ಫಲಿಸದ ಸಂತೋಷ ಸೂತ್ರ: ಬಿಜೆಪಿಗೆ ಹೀನಾಯ ಸೋಲು

ಬೆಂಗಳೂರು: ವಿಧಾನ ಸಭೆ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿಯಲ್ಲಿ ಈಗ ಆತ್ಮವಿಮರ್ಶೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ  ಬಿ ಎಲ್‌ ಸಂತೋಷ್‌ ಅವರು ಕಾರಣ ಎಂದು ಹೇಳಲಾಗುತ್ತಿದೆ.
224 ಸದಸ್ಯ ಬಲದಲ್ಲಿ ಬಿಜೆಪಿ ಕೇವಲ ಕೇವಲ 65 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇದಕ್ಕೆ ಕಾರಣವಾಗಿದ್ದು  ಪಕ್ಷವು ಹೊಸಬರಿಗೆ ಮಣೆ ಹಾಕಿ, ಹಳೆಯ ಪ್ರಭಾವಿ ನಾಯಕರನ್ನು ಕೈಬಿಟ್ಟಿರುವುದು ಕೇಸರಿ ಪಕ್ಷದ ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಫಲಿಸದ ಗುಜರಾತ್‌ ಸೂತ್ರ: ಕಳೆದ ವರ್ಷದ ಗುಜರಾತ್‌ ಚುನಾವಣೆಯಲ್ಲಿ ಹೆಚ್ಚು ಹೊಸಬರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿತ್ತು. ಆ ಪ್ರಯೋಗದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿತು. ಅದೇ ಪ್ರಯೋಗವನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಬಿಎಲ್‌ ಸಂತೋಷ್‌ ಮುಂದಾದರು. ಹಳಬರಿಗೆ ಮಣೆ ಹಾಕದೆ ತಮ್ಮ ನಿಷ್ಠರಿಗೆ ಮಣೆ ಹಾಕಲು ನೋಡಿದರು. ಆದರೆ ಕರ್ನಾಟಕದ ಮತದಾರರ ಅದಕ್ಕೆ ಕಿಂಚಿತ್ತು ಮನ್ನಣೆ ನೀಡಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.

ಘಟಾನುಘಟಿಗಳಿಗೆ ಟಿಕೆಟ್‌ ನಿರಾಕರಣೆ: ಪಕ್ಷದ ಪ್ರಮುಖ ನಾಯಕರಾದ ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲಾಯಿತು. ಇದು ಬಿಜೆಪಿಯಲ್ಲಿ ಚುನಾವಣೆ ಮೊದಲೇ ಕಲ್ಲೋಲವನ್ನೇ ಸೃಷ್ಟಿಸಿತು. ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ತೊರೆದರು. ಶೆಟ್ಟರ್‌ ಚುನಾವಣೆಯಲ್ಲಿ ಸೋತರೂ ಸಹಿತ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿತು. ಅದೇ ರೀತಿ ಲಕ್ಷ್ಮಣ ಸವದಿ ಅವರು ಬಿಜೆಪಿಯಿಂದ ಹೊರ ನಡೆದು ಕಾಂಗ್ರೆಸ್‌ ಸೇರ್ಪಡೆಗೊಂಡರು. ಅವರು ಅಥಣಿಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಅಥಣಿ ಪಕ್ಕದ ಎರಡು ತಾಲ್ಲೂಕುಗಳಲ್ಲಿ ಸವದಿ ಅವರು ಪ್ರಭಾವ ಬೀರಿದರು. ಸಂತೋಷ್‌ ಅವರ ನಡೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಯಡಿಯೂರಪ್ಪಗೆ ಕಣ್ಣೀರಿನ ವಿದಾಯ, ಲಿಂಗಾಯತರ ಆಕ್ರೋಶ:  ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟಿರುವುದರ ಹಿಂದೆ ಬಿಎಲ್‌ ಸಂತೋಷ್‌ ಇದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಇದೂ ಸಹಿತ ಲಿಂಗಾಯತ ಸಮುದಾಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಇದೆಲ್ಲವೂ ಸೇರಿ ಬಿಜೆಪಿ ಹಿನ್ನೆಡೆಗೆ ಕಾರಣವಾಯಿತು. ಬಿಜೆಪಿ ಸೋತ ಬಳಿಕ ಬಿಎಲ್‌ ಸಂತೋಷ್‌ ಅವರ ಕಡೆಗೆ ಎಲ್ಲರ ಕಣ್ಣು ಹೊರಳಿವೆ.

Umesha HS

Recent Posts

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

12 mins ago

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

28 mins ago

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…

29 mins ago

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಬೀದಿ‌ ಕಾಳಗ : ವಿಡಿಯೋ ವೈರಲ್

ಮಂಗಳೂರಿನ ಹೊರ ವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಜಗಳವಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜ್ ಫೆಸ್ಟ್…

49 mins ago

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಅಮಿತ್‌ ಶಾ ವಿರುದ್ಧ ಕೇಸ್‌ ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ತೆಲಂಗಾಣದಲ್ಲಿ ಕೇಸ್‌ ದಾಖಲಾಗಿದೆ. ಮುಖ್ಯ ಚುನಾವಣಾಧಿಕಾರಿ…

50 mins ago

ಕೇಂದ್ರ ಸಚಿವ ಭಗವಂತ ಖೂಖಾ ಒಬ್ಬ ಸುಳ್ಳಿನ ಸರ್ದಾರ : ಖಂಡ್ರೆ ಆರೋಪ

ನಗರದಲ್ಲಿ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಖಾ ವಿರುದ್ದ ಬ್ಯಾಟಿಂಗ್ ಮಾಡಿದ್ದಾರೆ.

1 hour ago