News Karnataka Kannada
Wednesday, May 01 2024
ಸಂಪಾದಕರ ಆಯ್ಕೆ

ಎಲ್ಲ ಜಾಗತಿಕ ಮಾರುಕಟ್ಟೆಗಳು ಭಾರಿ ಪ್ರಮಾಣದಲ್ಲಿ ಕುಸಿತ!

Share Market
Photo Credit :

ರಷ್ಯಾದ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಇಂದು ಬೆಳಿಗ್ಗೆ (ಫೆಬ್ರವರಿ 24) ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಯುದ್ಧದ ಭೀತಿಗೂ ಮುನ್ನವೇ ಮಾರುಕಟ್ಟೆ ಬೆಚ್ಚಿಬಿದ್ದಿದ್ದು, ಗುರುವಾರ ಆರಂಭವಾದ ತಕ್ಷಣ ಷೇರುಪೇಟೆ ಛಿದ್ರಗೊಂಡಿದೆ. ಸೆನ್ಸೆಕ್ಸ್ 13 ನೂರಕ್ಕೂ ಹೆಚ್ಚು ಅಂಕಗಳ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿತು.

ಷೇರು ಮಾರುಕಟ್ಟೆಯಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಖರೀದಿದಾರರು ಕಂಡುಬರುತ್ತಾರೆ ಎಂದು ಹೂಡಿಕೆದಾರರು ಲೆಕ್ಕಾಚಾರ ಹಾಕಿದ್ದರು. ಆದರೆ, ಪ್ರಿ-ಓಪನ್ ನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,800 ಅಧಿಕ ಅಂದರೆ ಶೇಕಡಾ 3.15ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಕೂಡ 500ಕ್ಕೂ ಹೆಚ್ಚು ಅಂಕಗಳ ನಷ್ಟದಲ್ಲಿತ್ತು. ಮಾರುಕಟ್ಟೆ ಪ್ರಾರಂಭವಾದ ತಕ್ಷಣ, ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಕುಸಿತ ಕಾಣಿಸಿಕೊಂಡಿತು. ಬೆಳಗ್ಗೆ ಮಾರುಕಟ್ಟೆ ಆರಂಭವಾದ ನಂತರ ಸೆನ್ಸೆಕ್ಸ್ 55,750 ಅಂಕಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತಿತ್ತು. ನಿಫ್ಟಿ 350 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 16,700ಕ್ಕಿಂತ ಕಡಿಮೆ ಅಂಕದಲ್ಲಿ ವಹಿವಾಟು ನಡೆಸುತ್ತಿತ್ತು.

ನಿರಂತರ ಮಾರುಕಟ್ಟೆ ಕುಸಿತ

ಮುಂಬೈ ಷೇರು ಮಾರುಕಟ್ಟೆ ನಿನ್ನೆ ಉತ್ತಮ ಆರಂಭವನ್ನು ಪಡೆದಿತ್ತು. ಆದರೆ ಸಂಜೆಯ ಅಂತ್ಯದ ವೇಳೆಗೆ ಎಲ್ಲವೂ ಕಣ್ಮರೆಯಾಗಿತ್ತು. ಬುಧವಾರದ ದಿನದ ವಹಿವಾಟಿನ ಅಂತ್ಯದ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ನಷ್ಟದಲ್ಲಿದ್ದವು. ವಹಿವಾಟು ಅಂತ್ಯಗೊಂಡಾಗ ಸೆನ್ಸೆಕ್ಸ್ 68.62 ಪಾಯಿಂಟ್ (ಶೇ. 0.12) ಇಳಿಕೆ ಕಂಡು 57,232.06 ಅಂಕಗಳಿಗೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 28.95 ಪಾಯಿಂಟ್‌ಗಳ (ಶೇ. 0.17) ನಷ್ಟದೊಂದಿಗೆ 17,063.25 ನಲ್ಲಿತ್ತು. ಈ ಮೂಲಕ ಸತತ ಆರನೇ ದಿನವೂ ಕುಸಿತದೊಂದಿಗೆ ಮಾರುಕಟ್ಟೆ ಬುಧವಾರ ಮುಕ್ತಾಯವಾಗಿತ್ತು.

ಪುಟಿನ್ ಉಕ್ರೇನ್ ಮೇಲೆ ಯುದ್ಧ ಉಕ್ರೇನ್ ಬಿಕ್ಕಟ್ಟಿನ ಒತ್ತಡವು ಜಾಗತಿಕ ಮಾರುಕಟ್ಟೆಯ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ವೇಗವಾಗಿ ಬದಲಾಗುತ್ತಿರುವ ಬೆಳವಣಿಗೆಗಳಿಂದ ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ. ರಷ್ಯಾ ಯಾವುದೇ ಸಮಯದಲ್ಲಿ ಉಕ್ರೇನ್ ಮೇಲೆ ದಾಳಿ ಮಾಡಬಹುದು ಎಂಬ ಆತಂಕ ನಿರಂತರವಾಗಿ ಹೂಡಿಕೆದಾರರನ್ನು ಇಷ್ಟು ದಿನ ಕಾಡತೊಡಗಿತ್ತು. ಇಂದು ಪುಟಿನ್ ಯುದ್ಧ ಘೋಷಣೆ ಮಾಡೋದ್ರಿಂದಿಗೆ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಈಗ ಪೂರ್ವ ಯುರೋಪಿನಲ್ಲಿನ ಉದ್ವಿಗ್ನ ಪರಿಸ್ಥಿತಿ 3ನೇ ಮಹಾಯುದ್ಧದ ಸ್ವರೂಪವನ್ನು ಪಡೆಯುವ ಸಾಧ್ಯತೆಯಿದೆ.

ಜಾಗತಿಕ ಮಾರುಕಟ್ಟೆಯಲ್ಲೂ ಕೆಟ್ಟ ಸ್ಥಿತಿ ಉಕ್ರೇನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕ ಯುಎಸ್ ಮಾರುಕಟ್ಟೆಗಳು ಭಾರಿ ನಷ್ಟದಲ್ಲಿವೆ. ಬುಧವಾರ, ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.38 ಶೇಕಡಾ, S&P 500 1.84 ಶೇಕಡಾ ಮತ್ತು ನಾಸ್ಟಾಕ್ ಕಾಂಪೋಸಿಟ್ ಶೇ. 2.57ರಷ್ಟು ಕುಸಿತಗೊಂಡಿದ್ದವು. ಏಷ್ಯಾದ ಬಹುತೇಕ ಎಲ್ಲ ಮಾರುಕಟ್ಟೆಗಳು ಗುರುವಾರ ನಷ್ಟದಲ್ಲಿವೆ. ಚೀನಾದ ಶಾಂಘಿ ಕಾಂಪೋಸಿಟ್ ಮಾತ್ರ ಸ್ಥಿರವಾಗಿದ್ದು, ಜಪಾನ್‌ನ ನಿಕ್ಕಿ ದಕ್ಷಿಣ ಕೊರಿಯಾದ ಕೋಸ್ಪಿ ಸೇರಿದಂತೆ ಎಲ್ಲ ಜಾಗತಿಕ ಮಾರುಕಟ್ಟೆಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು