Bengaluru 20°C
Ad

ಹಿರಿಯ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ನಿಧನ

ಪ್ರಖ್ಯಾತ ಹಿರಿಯ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಶನಿವಾರ(ಆಗಸ್ಟ್3 ) ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಾರ್ಧಕ್ಯ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದ ಯಾಮಿನಿ ಅವರಿಗೆ ಕಳೆದ ಏಳು ತಿಂಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಗಣೇಶ್ ಪಿಟಿಐಗೆ ತಿಳಿಸಿದ್ದಾರೆ.

ಹೊಸದಿಲ್ಲಿ : ಪ್ರಖ್ಯಾತ ಹಿರಿಯ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಶನಿವಾರ(ಆಗಸ್ಟ್3 ) ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಾರ್ಧಕ್ಯ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದ ಯಾಮಿನಿ ಅವರಿಗೆ ಕಳೆದ ಏಳು ತಿಂಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಗಣೇಶ್ ಪಿಟಿಐಗೆ ತಿಳಿಸಿದ್ದಾರೆ.

ಯಾಮಿನಿ ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ 9 ಗಂಟೆಗೆ ಅವರ ಇನ್‌ಸ್ಟಿಟ್ಯೂಟ್ – ಯಾಮಿನಿ ಸ್ಕೂಲ್ ಆಫ್ ಡ್ಯಾನ್ಸ್‌ಗೆ ತರಲಾಗುತ್ತಿದೆ. ಆಕೆಯ ಅಂತಿಮ ಸಂಸ್ಕಾರದ ವಿವರಗಳು ಇನ್ನೂ ಅಂತಿಮಗೊಂಡಿಲ್ಲ.

ಯಾಮಿನಿ ಅವರು ಆಂಧ್ರಪ್ರದೇಶದ ಚಿತ್ತೂರಿನ ಮದನಪಲ್ಲಿಯಲ್ಲಿ ಜನಿಸಿದ್ದರು. ತಮಿಳುನಾಡಿನ ಚಿದಂಬರಂ ನಲ್ಲಿ ಬೆಳೆದಿದ್ದರು.ಭರತನಾಟ್ಯ ಮತ್ತು ಕೂಚಿಪುಡಿ ಎರಡರಲ್ಲೂ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ಪ್ರಖ್ಯಾತಿಯ ಉತ್ತುಂಗಕ್ಕೇರಿದ ಅವರು ಆತ್ಮಚರಿತ್ರೆ “A Passion For Dance” ಬಿಡುಗಡೆ ಮಾಡಿದ್ದರು. ಪದ್ಮಶ್ರೀ (1968) ಪದ್ಮಭೂಷಣ (2001), ಮತ್ತು ಪದ್ಮವಿಭೂಷಣ (2016) ರಲ್ಲಿ ನೀಡಿ ಅವರನ್ನು ಗೌರವಿಸಲಾಗಿತ್ತು. ಅವರು ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನ ನರ್ತಕಿ ಗೌರವವನ್ನೂ ಪಡೆದಿದ್ದರು.

 

 

 

 

 

Ad
Ad
Nk Channel Final 21 09 2023