Ad

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ ಅರ್ಚಕ ನಿಧನ

ಜನವರಿ 20 ರಂದು ಅಯೋಧ್ಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಉತ್ತಪ್ರದೇಶ: ಜನವರಿ 20 ರಂದು ಅಯೋಧ್ಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ಅವರು ಇಂದು ನಿಧನ ಹೊಂದಿದ್ದಾರೆ.

Ad
300x250 2

ದೀಕ್ಷಿತ್ ಅವರು ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದವರು. ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾದ 121 ವಿದ್ವಾಂಸರ ತಂಡವನ್ನು ಇವರು ಮುನ್ನಡೆಸಿದವರು. ಇನ್ನು ದೀಕ್ಷಿತ್‌ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Ad
Ad
Nk Channel Final 21 09 2023
Ad