Bengaluru 22°C
Ad

ಕೆನರಾ ಕಾಲೇಜು ಮಾಜಿ ಪ್ರಾದ್ಯಾಪಕ ಪ್ರೋ.ಎಂ.ಆರ್.ಪ್ರಭು ನಿಧನ

, Former Professor

ಮಂಗಳೂರು: ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದ ಪ್ರೊಫೆಸರ್ ಎಂ. ರಾಘವೇಂದ್ರ ಪ್ರಭು ( 83 ) ಇವರು ಕಳೆದ ದಿನ(ಸೆ.26) ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಇತಿಹಾಸದಲ್ಲಿ ಎಂ.ಎ ಪದವಿಪಡೆದಿದ್ದ ಇವರು ಕೆನರಾ ಕಾಲೇಜಿನಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದರು. ಶಿಕ್ಷಣ ಇಲಾಖೆಗಾಗಿ ಇತಿಹಾಸದ ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ” ಅಸಂಗ ” ಸೇರಿದಂತೆ ಹಲವು ಕಥಾ ಸಂಕಲನಗಳು ಪ್ರಕಟವಾಗಿದೆ.

ಮಂಗಳೂರಿನ ಥಿಯೋಸಾಫಿಕಲ್ ಸೊಸೈಟಿಯ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮಂಗಳೂರಿನ ರಾಮಕೃಷ್ಣ ಮಠ ಸೇರಿದಂತೆ ಭಾರತದ ಹತ್ತು ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ಅಶೋಕನಗರದ ದಂಬೆಲ್ ನಿವಾಸಿಯಾಗಿದ್ದ ಪ್ರೊ.ಎಂ.ಆರ್ ಪ್ರಭುಗಳು ಒಬ್ಬರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಪ್ರೋ.ಎಂ.ಆರ್.ಪ್ರಭುಗಳ ನಿಧನಕ್ಕೆ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪದಾಧಿಕಾರಿಗಳು , ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಜಾದೂಗಾರ ಕುದ್ರೋಳಿ ಗಣೇಶ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023