ಚೆನ್ನೈ: ಖ್ಯಾತ ಕಾಲಿವುಡ್ ನಿರ್ಮಾಪಕ ದಿಲ್ಲಿ ಬಾಬು ಸೋಮವಾರ(ಸೆ.9ರಂದು) ನಿಧನರಾಗಿದ್ದಾರೆ. ಅವರ ಕುಟುಂಬದ ಮೂಲಗಳ ಪ್ರಕಾರ, ಅವರು ಸುಮಾರು ರಾತ್ರಿ 12.30ಕ್ಕೆ ನಿಧನರಾದರು ಮತ್ತು ಅವರ ಅಂತ್ಯಕ್ರಿಯೆ ಇಂದು (ಸೆಪ್ಟೆಂಬರ್ 9 ರಂದು) ನಡೆಯಲಿದೆ.
ದಿಲ್ಲಿ ಬಾಬು ಅವರಿಗೆ 50 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಕಾಲಿವುಡ್‌ನಲ್ಲಿ ನಿರ್ಮಾಪಕರಾಗಿ ಅನೇಕ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ಆಕ್ಸೆಸ್ ಫಿಲ್ಮ್ ಫ್ಯಾಕ್ಟರಿ ಮೂಲಕ, ʼರಾತ್ಸಾಸನ್ʼ ಮತ್ತು ʼಮರಗಧ ನಾನಯಂʼ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಬಂಡವಾಳ ಹಾಕಿದ್ದರು.
Ad