Bengaluru 22°C
Ad

ಖ್ಯಾತ ಸಾಹಿತಿ ಡಾ. ಕಮಲ ಹಂಪನಾ ನಿಧನಕ್ಕೆ ಕಸಾಪ ಸಂತಾಪ

ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ(೮೯) ಅವರು ಬೆಳಗಿನ ಜಾವ ರಾಜರಾಜೇಶ್ವರಿ ನಗರದ ತಮ್ಮ ಮಗಳು ಆರತಿ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೇಲೂರು: ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ(85) ಅವರು ಬೆಳಗಿನ ಜಾವ ರಾಜರಾಜೇಶ್ವರಿ ನಗರದ ತಮ್ಮ ಮಗಳು ಆರತಿ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Ad
300x250 2

ಮೃತ ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಂಪನಾ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಲ್ಲೇಶಗೌಡ, ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್ ಗೌಡರು, ಗೌ ಕಾರ್ಯದರ್ಶಿ ಬೊಮ್ಮೇಗೌಡ, ನಿರ್ದೇಶಕ ಹೆಚ್.ಎಂ.ದಯಾನಂದ್, ತಾ.ಗೌರವ ಕಾರ್ಯದರ್ಶಿ ಬೇಲೂರು ಬಿ.ಬಿ.ಶಿವರಾಜು, ಸದಸ್ಯ ನಾಗೇಶ್ ಯಾದವ್, ಜಿಲ್ಲಾ ರೋಟರಿ ಕಾರ್ಯದರ್ಶಿ ನಾಗೇಶ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಸಾಹಿತಿ ಕಮಲ ಹಂಪನ ಅವರ ನಿಧನಕ್ಕೆ ಹಾಸನ ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷರು .ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಬಿ.ಮದನ್ ಗೌಡ ಅವರು ಅಂತಿಮನಮನ ಸಲ್ಲಿಸಿದರು.

Ad
Ad
Nk Channel Final 21 09 2023
Ad