Ad

‘ಟೈಟಾನಿಕ್‌ʼ, ʼಅವತಾರ್‌ʼ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

ಹಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ, ಆಸ್ಕರ್‌ ವಿಜೇತ ಜಾನ್ ಲ್ಯಾಂಡೌ(63) ನಿಧನರಾಗಿದ್ದಾರೆ.ಶುಕ್ರವಾರ (ಜು.5ರಂದು) ಅವರು ನಿಧನರಾಗಿದ್ದು, ಶನಿವಾರ ಮಾಧ್ಯಮಕ್ಕೆ ಈ ವಿಚಾರವನ್ನು ತಿಳಿಸಲಾಗಿದೆ.

ನವದೆಹಲಿ: ಹಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ಮಾಪಕ, ಆಸ್ಕರ್‌ ವಿಜೇತ ಜಾನ್ ಲ್ಯಾಂಡೌ(63) ನಿಧನರಾಗಿದ್ದಾರೆ.ಶುಕ್ರವಾರ (ಜು.5ರಂದು) ಅವರು ನಿಧನರಾಗಿದ್ದು, ಶನಿವಾರ ಮಾಧ್ಯಮಕ್ಕೆ ಈ ವಿಚಾರವನ್ನು ತಿಳಿಸಲಾಗಿದೆ.

Ad
300x250 2

ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ದೀರ್ಘಾವಧಿಯ ನಿರ್ಮಾಪಕ ಪಾಲುದಾರರಾಗಿದ್ದ ಜಾನ್ ಲ್ಯಾಂಡೌ‌ ಕಳೆದ ಕೆಲ ಸಮಯದಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ವಿಶ್ವ ಚಿತ್ರರಂಗದ ದೊಡ್ಡ ಸಿನಿಮಾವೆಂದೇ ಹೇಳಲಾಗುವ ಜೇಮ್ಸ್‌ ಕ್ಯಾಮರೂನ್‌ ಅವರ ʼಟೈಟಾನಿಕ್‌ʼ ಹಾಗೂ ʼಅವತಾರ್‌ʼ ಸಿನಿಮಾಗಳಿಗೆ ಜಾನ್ ಲ್ಯಾಂಡೌ ಸಹ ನಿರ್ಮಾಪಕರಾಗಿದ್ದರು.

Ad
Ad
Nk Channel Final 21 09 2023
Ad