Bengaluru 23°C
Ad

ಆನ್ಸರ್ ಬ್ಯಾಕ್​ ಫೀಚರ್ ಉಳ್ಳ ಸ್ಕೂಟರ್‌ ರಿಲೀಸ್‌ : ಎಲ್ಲಿದ್ದೀಯಾ ಕೇಳಿದ್ರೆ,ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​!

ಇತ್ತೀಚೆಗೆ ಮನುಷ್ಯರಿಗಿಂತ ಹೆಚ್ಚು ವಾಹನಗಳ ಸಂಖ್ಯೆ ಹೆಚ್ಚಾಗಿದೆ ಅದರಿಂದ ಪಾರ್ಕಿಂಗ್‌ ಸ್ಥಳ ಕೂಡ ಇಲ್ಲದಂತಾಗಿದೆ. ಪಾರ್ಕಿಂಗ್‌ ಸಮಯದಲ್ಲಿ ನಮ್ಮ ವಾಹನವನ್ನು ಹುಡುಕುವುದೆ ಒಂದು ದೊಡ್ಡ ಟಾಸ್ಕ್‌ ಆಗಿರುತ್ತದೆ.

ಬೆಂಗಳೂರು: ಇತ್ತೀಚೆಗೆ ಮನುಷ್ಯರಿಗಿಂತ ಹೆಚ್ಚು ವಾಹನಗಳ ಸಂಖ್ಯೆ ಹೆಚ್ಚಾಗಿದೆ ಅದರಿಂದ ಪಾರ್ಕಿಂಗ್‌ ಸ್ಥಳ ಕೂಡ ಇಲ್ಲದಂತಾಗಿದೆ. ಪಾರ್ಕಿಂಗ್‌ ಸಮಯದಲ್ಲಿ ನಮ್ಮ ವಾಹನವನ್ನು ಹುಡುಕುವುದೆ ಒಂದು ದೊಡ್ಡ ಟಾಸ್ಕ್‌ ಆಗಿರುತ್ತದೆ. ಆದರೆ ಅಂತಹ ಸಮಸ್ಯೆಗೆ ಈಗ ನೂತನ ಲಕ್ಷಣವನ್ನು ಹೊಂದಿರುವ ಹೊಸ ಸ್ಕೂಟರ್‌ ಭಾರತದಲ್ಲಿ ಲಭ್ಯವಿದೆ.ಈಗಾಗಲೇ ಮಾರುಕಟ್ಟೆಯಲ್ಲಿರುವ ಫ್ಯಾಸಿನೊ ಸ್ಕೂಟರ್​ನ ಸುಧಾರಿತ ಫ್ಯಾಸಿನೊ ಎಸ್ ಅವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ‘ಆನ್ಸರ್ ಬ್ಯಾಕ್​ ಫೀಚರ್​ ಮೂಲಕ ಮೊಬೈಲ್​ನಲ್ಲೇ ಒಂದು ಬಟನ್ ಒತ್ತಿ ಸ್ಕೂಟರ್​ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತದೆ.

ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆಪ್ರೀಮಿಯಂ ಸ್ಕೂಟರ್ ಮಾದರಿಯಲ್ಲಿ ಆಕರ್ಷಕ ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ ಆಕರ್ಷಕ ಡಾರ್ಕ್ ಮ್ಯಾಟ್ ಬ್ಲೂ ಬಣ್ಣದಲ್ಲೂ ಸಿಗಲಿದೆ.

ಫ್ಯಾಸಿನೊ ಎಸ್ ಎಲ್ಲಾ ಯಮಹಾ ಅಧಿಕೃತ ಶೋರೂಂಗಳಲ್ಲಿ ಈ ಕೆಳಗಿನ ಬೆಲೆಯಲ್ಲಿ ಲಭ್ಯವಿದೆ
ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ರೂ. 93,730/-
ಡಾರ್ಕ್ ಮ್ಯಾಟ್ ಬ್ಲೂ ರೂ. 94,530/-

‘ಯಮಹಾ ಸ್ಕೂಟರ್ ಆನ್ಸರ್​​ ಬ್ಯಾಕ್’ ಎಂಬ ಯಮಹಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಈ ಫೀಚರ್​ ಅನ್ನು ಬಳಸಬಹುದು. ಅಪ್ಲಿಕೇಶನ್ ನೊಳಗಿನ ಆನ್ಸರ್​ ಬ್ಯಾಕ್ ಬಟನ್ ಒತ್ತುವ ಮೂಲಕ, ಸವಾರರು ತಮ್ಮ ಸ್ಕೂಟರ್ ಅನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದು ಸುಮಾರು ಎರಡು ಸೆಕೆಂಡುಗಳ ಕಾಲ ಹಾರ್ನ್ ಮಾಡುತ್ತಾ ಎಡ ಮತ್ತು ಬಲ ಇಂಡಿಕೇಟರ್​ಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಆರಾಮದಾಯಕ ಸವಾರಿ ಅನುಭವ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ / ಆ್ಯಪ್ ಸ್ಟೋರ್ ನಿಂದ ಸುಲಭವಾಗಿ ಇನ್​ಸ್ಟಾಲ್​ ಮಾಡಬಹುದು.

Ad
Ad
Nk Channel Final 21 09 2023
Ad