ಮುಂಬೈ: ಯುಪಿಐ ಮೂಲಕ ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಣವನ್ನು ವರ್ಗಾವಣೆಗೆ ಅವಕಾಶವಿದೆ. ಇಲ್ಲಿಯವರೆಗೆ ಒಂದು ಬಾರಿಗೆ ಗರಿಷ್ಟ 1 ಲಕ್ಷ ರೂ.ವರೆಗೆ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಲು ಅವಕಾಶವಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಯುಪಿಐ ಮೂಲಕ 5 ಲಕ್ಷ ರೂ. ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ತಿಳಿಸಿದರು.
ಆಹಾರ ಹಣದುಬ್ಬರ ಇಳಿಕೆಯಾಗದ ಕಾರಣ ನಿರೀಕ್ಷೆಯಂತೆ ಆರ್‌ಬಿಐ ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರವನ್ನು 6.5% ರಲ್ಲಿಯೇ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ.
ಚಿಲ್ಲರೆ ಹಣದುಬ್ಬರವನ್ನು 4% ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡುತ್ತಿಲ್ಲ. ಹಣದುಬ್ಬರವು 4%ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾದರೆ ಮಾತ್ರ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ಶಶಿಕಾಂತ್ ದಾಸ್ ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.