ರಿಲಯನ್ಸ್ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಏರಿಸಿದೆ. ಬೆಲೆ ಏರಿಕೆಯ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಉತ್ತಮ ರೀಚಾರ್ಜ್ಗಳನ್ನು ಆಯ್ಕೆ ಮಾಡುವ ಮೂಲಕ ರೀಚಾರ್ಜ್ ಮಾಡುತ್ತಿದ್ದಾರೆ.
ಟೆಲಿಕಾಂ ಖಾಸಗಿ ಕಂಪನಿಗಳ ಬೆಲೆ ಏರಿಕೆಯಿಂದ ಬಿಎಸ್ಎನ್ಎಲ್ 229 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇದರ ಮೂಲಕ 30 ದಿನಗಳವರೆಗೆ ಬಳಕೆದಾರರು ಯಾವುದೇ ನೆಟ್ವರ್ಕ್ಗೆ ಉಚಿತ ಕರೆ ಮಾಡಬಹುದಾಗಿದೆ.
ಬಿಎಸ್ಎನ್ಎಲ್ 229 ರೀಚಾರ್ಜ್ ಪ್ಲಾನ್ ಮೂಲಕ ಅನಿಯಮಿತ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡುತ್ತದೆ. ಜೊತೆಗೆ ಡೇಟಾ ಪ್ರಯೋಜನ ಕೂಡ ಇದರಲ್ಲಿದೆ. ಈ ಯೋಜನೆಯನ್ನು ಅಳವಡಿಸಿಕೊಂಡವರು 60ಜಿಬಿ ಡೇಟಾ ಪಡೆಯುತ್ತಾರೆ. ಅಂದರೆ ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಸಿಗುತ್ತದೆ.