Bengaluru 22°C
Ad

ಬಾಂಬೆ ಷೇರುಪೇಟೆ ಸೂಚ್ಯಂಕ ಭರ್ಜರಿ ಏರಿಕೆ; ಗಡಿ ತಲುಪಿದ ನಿಫ್ಟಿ

Stock

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಹಿನ್ನೆಲೆಯಲ್ಲಿ ಇಂದು (ಜೂನ್‌ 13) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.

Ad
300x250 2

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 348 ಅಂಕಗಳ ಏರಿಕೆಯೊಂಧಿಗೆ 76,954.15 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ ಕೂಡಾ 110 ಅಂಕಗಳ ಜಿಗಿತದೊಂದಿಗೆ 23,433.10ಅಂಕಗಳ ಗಡಿ ತಲುಪಿದೆ.

ಬುಧವಾರದ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿತ್ತು. ಗುರುವಾರ ಅಮೆರಿಕದ ಫೆಡರಿಲ್‌ ರಿಸರ್ವ್‌ ಪಾಲಿಸಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು ಮುಂದುವರಿದಿದೆ.

Ad
Ad
Nk Channel Final 21 09 2023
Ad