Bengaluru 21°C
Ad

ರಿವೋಲ್ಟ್ ಮೋಟಾರ್ಸ್ ಕಂಪನಿಯ ಆರ್‌ವಿ1 ಇವಿ ಬೈಕ್ ಬಿಡುಗಡೆ

ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ಪಾದನಾ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ಹೊಸದಾಗಿ ರಿವೋಲ್ಟ್ ಆರ್‌ವಿ1 ಇವಿ ಬೈಕ್ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ಪಾದನಾ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ಹೊಸದಾಗಿ ರಿವೋಲ್ಟ್ ಆರ್‌ವಿ1 ಇವಿ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೊಸ ಇವಿ ಬೈಕಿನ ಆರಂಭಿಕ ಸ್ಟ್ಯಾಂಡರ್ಡ್ ವೆರಿಯೆಂಟ್ ಎಕ್ಸ್‌ ಶೋರೂಂ ಪ್ರಕಾರ ರೂ. 84,990 ಮತ್ತು ಟಾಪ್ ಎಂಡ್ ಮಾದರಿಯು ರೂ. 99,990 ಬೆಲೆ ಹೊಂದಿದೆ. ಮೋಟಾರು ಸೈಕಲ್‌ಗಳು ಸದ್ಯ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಮಾರಾಟದಲ್ಲಿ ಇವು ಶೇ. 70 ರಷ್ಟು ಪಾಲುಹೊಂದಿವೆ.

ಈ ವಿಶಾಲವಾದ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ವಿಭಾಗವು ಅತಿದೊಡ್ಡ ಪಾಲನ್ನು ಹೊಂದಿದ್ದು, ವಾರ್ಷಿಕವಾಗಿ ಒಟ್ಟು 1.25 ಕೋಟಿ ದ್ವಿಚಕ್ರ ವಾಹನಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳು ಮಾರಾಟವಾಗುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಬೇಡಿಕೆಗಳನ್ನು ಗುರಿಯಾಗಿಸಿ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇವಿ ಮೋಟಾರ್ ಸೈಕಲ್ ಮಾದರಿಗಳನ್ನು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ನೀಡುವ ಇವಿ ಬೈಕ್ ಗಳನ್ನು ಪರಿಚಯಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಈಗಾಗಲೇ ರಿವೋಲ್ಟ್ 400 ಸರಣಿ ಇವಿ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇದೀಗ ಬಜೆಟ್ ಇವಿ ಬೈಕ್ ಖರೀದಿದಾರರಿಗೆ ಅನುಕೂಲಕರವಾಗುವ ಆರ್‌ವಿ1 ಇವಿ ಬೈಕ್ ಬಿಡುಗಡೆ ಮಾಡಿದ್ದು, ಇದು ಸಾಮಾನ್ಯ ಪೆಟ್ರೋಲ್ಮೋ ಟಾರ್‌ಸೈಕಲ್‌ಗಳಿಗಿಂತಲೂ ಮೂರು ಪಟ್ಟು ಕಡಿಮೆ ಮಾಲೀಕತ್ವದ ವೆಚ್ಚದೊಂದಿಗೆ ದೀರ್ಘ ಕಾಲಿನ ಬಾಳ್ವಿಕೆಯನ್ನು ಖಾತ್ರಿಪಡಿಸುತ್ತದೆ.

 

Ad
Ad
Nk Channel Final 21 09 2023