ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 77 ಡಾಲರ್ಗಿಂತ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲು ಪ್ರತಿ ಬ್ಯಾರೆಲ್ಗೆ 76.81 ಡಾಲರ್ನಂತೆ ವಹಿವಾಟು ನಡೆಸುತ್ತಿದೆ. ಡಬ್ಲ್ಯೂಟಿಐ ಕಚ್ಚಾತೈಲ ಬ್ಯಾರೆಲ್ಗೆ 73.52 ಡಾಲರ್ನಂತೆ ವಹಿವಾಟು ನಡೆಸುತ್ತಿದೆ.
ಮಾರ್ಚ್ 2024 ರಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಯನ್ನು ರೂ 2 ರಷ್ಟು ಕಡಿತಗೊಳಿಸಿದಾಗಿನಿಂದ ದೇಶದ ಹೆಚ್ಚಿನ ಭಾಗಗಳಲ್ಲಿ ಬೆಲೆಗಳು ಬದಲಾಗದೆ ಉಳಿದಿವೆ.
ದೇಶದ ಪ್ರಮುಖ ಮಹಾನಗರಗಳಲ್ಲಿನ ಬೆಲೆಗಳು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.76 ರೂ. ಪ್ರತಿ ಲೀಟರ್ ಡೀಸೆಲ್ 87.66 ರೂ.ಗೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂ. ಮತ್ತು ಡೀಸೆಲ್ ದರ ಲೀಟರ್‌ಗೆ 89.96 ರೂ.ಇದೆ.
ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.73 ರೂ ಮತ್ತು ಡೀಸೆಲ್ ದರ 92.32 ರೂ. ಕೋಲ್ಕತ್ತಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 104.93 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 91.75 ರೂ. ಇದೆ.
Ad